ಕಲ್ಪ ಮೀಡಿಯಾ ಹೌಸ್ | ಲಖನೌ |
ಇಷ್ಟ ಪಟ್ಟು ಪ್ರೇಮ ವಿವಾಹವಾದ ತನ್ನ ಪತಿಗೆ ಪತ್ನಿಯು ಕೈಕಾಲು ಕಟ್ಟಿ, ಮರ್ಮಾಂಗಕ್ಕೆ ಸಿಗರೇಟಿನಿಂದ ಸುಟ್ಟಿರುವ ದಾರುಣ ಘಟನೆ ಬಿಜ್ನೋರ್’ನಲ್ಲಿ ನಡೆದಿದೆ.
ಘಟನೆ ನಡೆದು ಹಲವು ದಿನಗಳ ನಂತರ ಇದರ ವೀಡಿಯೋ ವೈರಲ್ ಆಗಿದ್ದು, ಆನಂತರ ಬೆಳಕಿಗೆ ಬಂದಿದೆ.

ಆಕೆ ಪತಿಯ ಕೈಕಾಲು ಕಟ್ಟಿ, ಥಳಿಸಿ, ಕತ್ತು ಹಿಸುಕಿ, ಸಿಗರೇಟಿನಿಂದ ಸುಟ್ಟು ಹಾಕಿರುವ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಪತಿ ಕೈಕಾಲು ಕಟ್ಟಿ ಖಾಸಗಿ ಭಾಗಕ್ಕೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Also read: ತೆಲಂಗಾಣದಲ್ಲಿ ಆರ್’ಆರ್ ತೆರಿಗೆ | ಏನಿದು ಅಮಿತ್ ಶಾ ಹೇಳಿದ ಕುತೂಹಲಕಾರಿ ವಿಚಾರ?
ಅಲ್ಲದೇ, ಕೆಲವು ಸಮಯದ ಹಿಂದೆ ಪತಿಗೆ ಮಾದಕ ಮಾತ್ರೆಗಳನ್ನು ನೀಡಿ ನಂತರ ಸಿಗರೇಟ್’ನಿಂದ ಆಕೆಯ ದೇಹವನ್ನು ಸುಟ್ಟು ಹಾಕಿದ್ದ. ನಂತರ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಳು.

ವ್ಯಕ್ತಿಯ ಮನೆಯೊಳಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪತ್ನಿ ತನಗೆ ನೀಡಿರುವ ಹಿಂಸೆಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಇವುಗಳನ್ನು ಪೊಲೀಸರಿಗೆ ನೀಡಿ ಆತ ದೂರ ನೀಡಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post