ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ತೆಲಂಗಾಣ ರಾಜ್ಯದಲ್ಲಿ ಸಾಮಾನ್ಯ ತೆರಿಗೆಗಳ ಜೊತೆಯಲ್ಲಿ ಆರ್ ಆರ್ ತೆರಿಗೆ ಸಹ ಜಾರಿಯಲ್ಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ #Amith Shah ಕಟಕಿಯಾಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಆರ್ ಆರ್ ತೆರಿಗೆ ನಡೆಯುತ್ತಿದೆ. ಆರ್ ಆರ್ ತೆರಿಗೆ ಎಂದರೆ ರಾಹುಲ್ ಗಾಂಧಿ #Rahul Gandhi ಮತ್ತು ರೇವಂತ್ ರೆಡ್ಡಿ ತೆರಿಗೆ. ತೆಲಂಗಾಣದಲ್ಲಿ ಈಗ ಹೈಕಮಾಂಡ್’ಗೆ ಎಟಿಎಂ ಇದೆ. ಹೈಕಮಾಂಡ್’ಗೆ ಹಣ ತುಂಬಲು ರೇವಂತ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ಇನ್ನು, ಲೋಕಸಭೆ ಚುನಾವಣೆ ನಂತರ ರೇವಂತ್ ರೆಡ್ಡಿ ಸ್ಥಾನವನ್ನು ಕಾಂಗ್ರೆಸ್ ಬದಲಿಸಲಿದೆ ಎಂದು ಶಾ ಭವಿಷ್ಯ ನುಡಿದಿದ್ದಾರೆ.
Also read: ಚುನಾವಣೆಗೆ ಸಕಲ ಸಿದ್ಧತೆ: ಮತಗಟ್ಟೆಗಳತ್ತ ಹೆಜ್ಜೆ ಹಾಕಿದ ಸಿಬ್ಬಂದಿಗಳು
ರೇವಂತ್ ಈಗಷ್ಟೇ ಸಿಎಂ ಆಗಿದ್ದಾರೆ. ನನ್ನ ವಿರುದ್ಧ ಕೇಸ್ ಹಾಕಿದ್ದಾರೆ. ನಾನು ಅವರಂತೆ ದೂರು ನೀಡುವುದಿಲ್ಲ. ನಾನು ಅದನ್ನು ಹೈಕೋರ್ಟ್’ಗೆ ಕೊಂಡೊಯ್ಯುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post