ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಇತ್ತೀಚೆಗೆ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆಯಲ್ಲೇ ಹತ್ಯೆಯಾದ ರಾಜಕಾರಣಿ, ಗ್ಯಾಂಗ್’ಸ್ಟರ್ ಅತೀಕ್ ಅಹ್ಮದ್ Atiq Ahmed ಸಮಾಧಿ ಮೇಲೆ ರಾಷ್ಟ್ರಧ್ವಜವನ್ನು Natoinal Flag ಹಾಕಿದ್ದದ ಕಾಂಗ್ರೆಸ್ ನಾಯಕನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಓಲ್ಡ್ ಸಿಟಿಯ ಕಸರಿ ಮಸಾರಿ ಸ್ಮಶಾಣದಲ್ಲಿ ಅತೀಕ್ ಸಮಾಧಿ ಮಾಡಲಾಗಿದೆ. ಸ್ಥಳೀಯ ಕಾಂಗ್ರೆಸ್ ನಾಯಕ ರಾಜಕುಮಾರ್ ಸಿಂಗ್ ರಜ್ಜು ಎಂಬಾತ ಈ ಸಮಾಧಿ ಮೇಲೆ ರಾಷ್ಟ್ರಧ್ವಜವನ್ನು ಇರಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೊದಲ್ಲಿ ರಾಜಕುಮಾರ್ ಸಿಂಗ್ ಅತಿಕ್’ನನ್ನು ಹುತಾತ್ಮ ಎಂದು ಕರೆದಿದ್ದಾನೆ. ಅಲ್ಲದೇ ಅತೀಕ್’ಗೆ ಭಾರತ ರತ್ನ ನೀಡಬೇಕೆಂದು ಎಂದು ಹೇಳಿ ಸಮಾಧಿಯ ಮೇಲೆ ತ್ರಿವರ್ಣ ಧ್ವಜವನ್ನು ಹರಡಿರುವುದು ಕಂಡುಬಂದಿದೆ. ಆದರೆ ಈ ವೀಡಿಯೋ ಫುಟೇಜ್’ನ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ.
Also read: ರಾಹುಲ್ ಗಾಂಧಿಗೆ ಹಿನ್ನಡೆ: ಜೈಲು ಶಿಕ್ಷೆಯನ್ನು ಎತ್ತಿ ಹಿಡಿದ ಸೂರತ್ ನ್ಯಾಯಾಲಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post