ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ಲಾಕ್’ಡೌನ್ ಹಿನ್ನೆಲೆಯಲ್ಲಿ ಎಲ್ಲವೂ ಬಂದ್ ಆಗಿರುವ ವೇಳೆ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ಬಡಾವಣೆಯ ಕಡು ಬಡವರು, ನಿರಾಶ್ರಿತರ ಹಾಗೂ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ಭದ್ರಾವತಿಯ ಕೆಲವು ಯುವಕರು ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಯುವಕರ ತಂಡವೊಂದು ನಗರಸಭೆಯ ಅನುಮತಿ ಪಡೆದು, ವಿವಿಧ ಬಡಾವಣೆಯಲ್ಲಿ ಆಹಾರ ಹಂಚಿಕೆ ಮಾಡಿದ್ದು, ಈ ಸಕಾರ್ಯಕ್ಕೆ ನಗರಸಭೆ ಅಧಿಕಾರಿಗಳೇ ಖುದ್ದು ವಾಹನ ಕಳುಹಿಸಿಕೊಟ್ಟು ಸಹಕಾರ ನೀಡಿದ್ದಾರೆ.
ಯುವ ತರುಣರಾದ ಹರೀಶ್, ಯತೀಶ್, ಪ್ರಮೋದ್, ಧನಂಜೇಯ, ಅರುಣ, ಚಂದ್ರಣ್ಣ, ಸಿರೀಶ್, ಭಾನುಪ್ರಕಾಶ್ ಆಚಾರ್ಯ ಇದ್ದರು.
Get in Touch With Us info@kalpa.news Whatsapp: 9481252093















