Tuesday, July 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮನೆ ಗೆದ್ದು ಮಾರು ಗೆದ್ದ ರಂಗಭೂಮಿ ಹಾಗೂ ದೂರದರ್ಶನ ಕಲಾವಿದೆ ಮಧು ಚಂದಪ್ಪ

July 24, 2020
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಪ್ರದೇಶ ಪ್ರಾಕೃತಿಕ ರಮ್ಯತೆಯ ತಾಣವಾಗಿದೆ. ಪಶ್ಚಿಮ ಘಟ್ಟದ ತಪ್ಪಲು, ದಟ್ಟ ಮಲೆನಾಡು. ಪ್ರಕೃತಿಯ ನೈಸರ್ಗಿಕ ಸೊಬಗಿನ ನಯನ ಮನೋಹರ ದೃಶ್ಯಗಳು. ನಿತ್ಯ ಹರಿದ್ವರ್ಣದ ಕಾನನಗಳಲ್ಲಿ ಗಗನಚುಂಬಿ ವೃಕ್ಷ ಸಮೂಹಗಳು. ವೃಕ್ಷರಾಜಿಗಳನ್ನು ಸುತ್ತಿ ತಬ್ಬಿ ಪಸರಿಸಿ ನಿಂತ ಬಳ್ಳಿ, ತರುಲತೆ ವನಸುಮಗಳು. ಬೆಟ್ಟ ಗುಡ್ಡ, ಗಿರಿ, ಕಂದರಗಳು. ಅವುಗಳಿಂದ ತರಂಗ ತರಂಗಗಳಾಗಿ ಧುಮ್ಮಿಕ್ಕುವ ಅಬ್ಬಿಗಳು. ವೈವಿಧ್ಯಮಯ ಪ್ರಾಣಿ ಸಂಕುಲ.

ಪ್ರಕೃತಿಯ ತದ್ಯಾತ್ಮತೆಗೆ ಅನುಗುಣವಾಗಿ ಸಂಗೀತದ ಕಲರವ ಹೊಮ್ಮಿಸುವ ಖಗ ಸಂಕುಲಗಳು. ಇಲ್ಲಿಯ ಜಾವಲಿ ಎಂಬಲ್ಲಿಂದ ಹೇಮಾವತಿ ನದಿಯ ಉಗಮವಾಗುತ್ತದೆ. ’ದೇವರ ಮನೆ’ ಮುಂತಾದ ಐತಿಹಾಸಿಕ ಚಾರಣ ಧಾಮಗಳಿವೆ. ಪ್ರಕೃತಿದತ್ತವಾದ ನಿಸರ್ಗಕ್ಕೆ ಅನುವಾಗಿ ಮಾನವ ಸೃಜಿತ ವಿಸ್ತಾರವಾದ ಕಾಫಿ, ಕಂಗು, ತೆಂಗು ಏಲಕ್ಕಿ, ಕಾಳು ಮೆಣಸುಗಳ ತೋಟಗಳು, ಬತ್ತದ ಗದ್ದೆಗಳೂ ಕಣ್ – ಮನ ಸೆಳೆಯುತ್ತವೆ. ನಾಡಿನ ಖ್ಯಾತ ಸಾಹಿತಿ ಪೂರ್ಣ ಚಂದ್ರ ತೇಜಸ್ವಿಯವರ ’ನಿರುತ್ತರ’ ಎಸ್ಟೇಟ್ ಇಲ್ಲಿದೆ. ಅವರ ಪ್ರಸಿದ್ಧ ’ಕರ್ವಾಲೋ’ ಕಾದಂಬರಿಯಲ್ಲಿ ಜೀವ ವಿಕಾಸದ ನಿಗೂಢತೆಗಳೊಂದಿಗೆ ಮೂಡಿಗೆರೆ ಮತ್ತು ಪಶ್ಚಿಮ ಘಟ್ಟದ ನೈಸರ್ಗಿಕತೆಯ ರಮ್ಯತೆ ದೃಶ್ಯ ಕಾವ್ಯಗಳಂತೆ ಚಿತ್ರಿಸಲ್ಪಟ್ಟಿದೆ.

ರಂಗಭೂಮಿ ಕಲಾವಿದೆ ಮಧು ಚಂದಪ್ಪ ಅವರು ಇಂತಹ ನೈಸರ್ಗಿಕವಾದ ಪ್ರಕೃತಿ ರಮ್ಯತೆಯ ಮಲೆನಾಡ ಮಡಿಲಲ್ಲಿ ಹುಟ್ಟಿ ಬೆಳೆದವರು. ಚಂದಪ್ಪ ಎಂ.ಎಸ್. ಹಾಗೂ ಗೌರಿ ದಂಪತಿಗಳ ಎರಡು ಮಕ್ಕಳಲ್ಲಿ ಕಿರಿಯವರು. ಹಿರಿಯವರು ಸೋದರ ಮನೋಜ್ ಕುಮಾರ್. ಮಧು ಅವರು ಆಟ, ಪಾಠ ಶಾಲಾ ಕಲಿಕೆಯೊಂದಿಗೆ ಅಭಿನಯ ಕಲೆಯನ್ನು ಮೈಗೂಡಿಸಿಕೊಂಡವರು. ಶಾಲಾ ಕಾಲೇಜುಗಳಲ್ಲಿ ಛದ್ಮವೇಷ/ಪ್ರತಿಭಾ ಸ್ಪರ್ಧೆಗಳಲ್ಲಿ, ವಾರ್ಷಿಕೋತ್ಸವಗಳಲ್ಲಿ ಮೊದಮೊದಲು ಅಭಿನಯಿಸಿ ಅನುಭವ ಗಳಿಸಿಕೊಂಡರು. ಮೂಡಿಗೆರೆಯ ಡಿ.ಎಸ್.ಬಿ.ಜಿ. ಪ್ರಥಮ ದರ್ಜೆ ಕಾಲೇಜಿನಿಂದ ಕಲಾ ವಿಭಾಗದಲ್ಲಿ ಸ್ನಾತಕ ಪದವಿ ಪಡೆದವರು.

ಕಾಲೇಜು ದಿನಗಳಲ್ಲಿ ಮತ್ತು ಅನಂತರ ಅನೇಕ ಬೀದಿ ನಾಟಕಗಳಲ್ಲಿ ಅಭಿನಯಿಸಿದವರು. ಬೀದಿನಾಟಕಗಳು ಸಮಕಾಲೀನ ಸಾಮಾಜಿಕ ಪಿಡುಗುಗಳ ವಿರುದ್ಧದ ಧ್ವನಿಯಾಗಿದ್ದವು. ಮುಖ್ಯವಾಗಿ ಸ್ತ್ರೀ ಸ್ವಾತಂತ್ರ್ಯ, ಮಹಿಳಾ ಶೋಷಣೆ, ಜಾತಿ ತಾರತಮ್ಯಗಳು, ಕೂಲಿಕಾರರ, ದಲಿತರ ಶೋಷಣೆ, ಅರಣ್ಯ ರಕ್ಷಣೆ, ಮತದಾನ ಜಾಗೃತಿ, ಏಡ್ಸ್‌ ಜಾಗೃತಿ, ಸ್ವಚ್ಛ ಪರಿಸರ, ಸರ್ವ ಶಿಕ್ಷಣ, ದೌರ್ಜನ್ಯ, ಅತ್ಯಾಚಾರ ಮೊದಲಾದ ವಿಚಾರಗಳ ಕುರಿತು ಜನಜಾಗೃತಿಗೊಳಿಸುವ ಗುರಿಯನ್ನು ಹೊಂದಿದ್ದವು. ಮಧು ಅವರು ಈ ಬೀದಿ ನಾಟಕಗಳಿಂದ ಅಭಿನಯದ ಗಟ್ಟಿ ತಳಹದಿಯನ್ನು ಪಡೆದು ಮತ್ತಷ್ಟು ಆಸಕ್ತಿಯನ್ನು ಹೆಚ್ಚಿಸಿಕೊಂಡರು.
ಬೀದಿ ನಾಟಕಗಳ ಅನುಭವದ ಆಧಾರದ ಮೇಲೆ ಮಧು ಅವರನ್ನು ರಂಗಭೂಮಿ ಕೈಬೀಸಿ ಕರೆಯಿತು. ಹಲವಾರು ಪ್ರಸಿದ್ಧ ರಂಗಕರ್ಮಿಗಳ ಹಾಗೂ ನಿರ್ದೇಶಕರ ಗರಡಿಯಲ್ಲಿ ಪಳಗುವ ಅವಕಾಶ ದೊರೆಯಿತು. ಮಧು ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿ ನಿರ್ದೇಶಕರಿಂದಲೂ, ಪ್ರೇಕ್ಷಕರಿಂದಲೂ ಸೈ ಎನಿಸಿಕೊಂಡರು. ’ಒಂದು ಬೊಗಸೆ ನೀರು’, ’ಗರ್ಭ ಸಂಘರ್ಷ’ , ’ಬದುಕು ಜಟಕಾ ಬಂಡಿ’, ಸಂಭಾವಿತರು’, ’ಮತ್ತೆ ಏಕಲವ್ಯ’, ’ಅಶೋಕ’ ’ಮಾಧ್ಯಮ ಆಯೋಗ, ಮೃಗನಯನಿ (ಹಿಂದಿ) ಕುವೆಂಪು ಅವರ ’ಜಲಗಾರ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಒಂದು ಬೊಗಸೆ ನೀರು ಪ್ರೊ. ರಾಜಪ್ಪ ದಳವಾಯಿಯವರ ಸುಪ್ರಸಿದ್ಧ ನಾಟಕ. ಮಹತ್ವಾಕಾಂಕ್ಷೆಯೇ ಮನುಜ ರೂಪದಲ್ಲಿ ಮೂರ್ತಿವೆತ್ತು ಬಂದಿತ್ತೋ ಎಂದೆಣಿಸುವ ಗ್ರೀಕ್ ವೀರ ಅಲೆಕ್ಸಾಂಡರನ ಬದುಕಿನ ಅಸಹಾಯಕತೆಯ ದಾರುಣ ಚಿತ್ರಣ. ನಿರ್ದೇಶನ ಚಂದ್ರಶೇಖರ ಆಚಾರಿ ಅವರದು. ಈ ನಾಟಕದಲ್ಲಿ ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿ, ಅಲೆಕ್ಸಾಂಡರನ ಗುರು ಅರಿಸ್ಟಾಟಲನ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವರು ಮಧು.


ಮುಂದೆ, ಮನೆ ಗೆದ್ದು ಮಾರು ಗೆಲ್ಲು ಎನ್ನುವ ಗಾದೆಯಂತೆ ಬೀದಿ ನಾಟಕ ಹಾಗೂ ರಂಗಭೂಮಿಯಲ್ಲಿ ಗಳಿಸಿದ ಅಭಿನಯದ ಅನುಭವದಿಂದ ಕಿರುತೆರೆಗೆ ಬಂದರು. ಕಲ್ಹರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಮಜಭಾರತ ಕಾರ್ಯಕ್ರಮದಲ್ಲಿ ಒಂದು ವರ್ಷ ಕಾಲ ಸತತವಾಗಿ ಅಭಿನಯಿಸಿದರು. ಅದಕ್ಕೆ ನಡೆದ ಆಯ್ಕೆ ಪ್ರಕ್ರಿಯೆ ಕುತೂಹಲಕರವಾಗಿದೆ. ಶಿವಮೊಗ್ಗದಲ್ಲಿ ಆಯ್ಕೆ (Audition) ನಡೆಯಲಿದೆ ಎಂದು ಇವರಿಗೆ ತಿಳಿದದ್ದೆ ಎರಡು ದಿನ ಮುಂಚಿತವಾಗಿ. ಯಾವುದೇ ಪೂರ್ವ ತಯಾರಿಯಿಲ್ಲದೇ ನೇರವಾಗಿ ಶಿವಮೊಗ್ಗಕ್ಕೆ ತೆರಳಿ ಎಂದೋ ಹಿಂದೆ ಮಾಡಿದ್ದ ಪಾತ್ರವನ್ನೇ ಅಭಿನಯಿಸಿದರು. ಮೊದಲ ಸುತ್ತು ಗೊಂದಲದಲ್ಲಿ ಮುಗಿದು, ಕೇವಲ ಮೂರು ನಿಮಿಷ ಕಾಲಾವಕಾಶ ನೀಡಿ ಒಂದು ವಿಭಿನ್ನ ಪಾತ್ರದ ತಯಾರಿ ಮಾಡಿಕೊಂಡು ಬನ್ನಿ ಎಂದರು. ನಿಂತ ನೆಲದಲ್ಲೇ ಬಜಾರಿ ಸೊಸೆ ಹಾಗೂ ಅತ್ತೆಗೆ ಹೆದರುವ (ಒಂದರಲ್ಲೇ ದ್ವಿಪಾತ್ರ) ನಿರ್ವಹಿಸಿದರು.

ಅಂತಿಮ ಸುತ್ತಿನಲ್ಲಿ ಬೇರೆ ಬೇರೆ ಜಿಲ್ಲೆಯಿಂದ ಬಂದ ಐದೈದು ಕಲಾವಿದರ ತಂಡದೊಂದಿಗೆ ಪಾತ್ರಗಳನ್ನು ಹಂಚಿಕೊಂಡು ಹತ್ತು ನಿಮಿಷಗಳ ಕಾಲಾವಕಾಶದಲ್ಲಿ ಅಭಿನಯಿಸಬೇಕಿತ್ತು. ಹಾಗೆ ಅಭಿನಯಿಸಿ ಊರಿಗೆ ಬಂದರು. ನಾಲ್ಕು ವಾರಗಳ ಅನಂತರ ಕರೆ ಬಂತು. ಆ ಒಂದು ಕರೆ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿತು ಎಂದು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಮಾರ್ಚ್ 1, 2019 ರಿಂದ ಒಂದು ವರ್ಷ ಕಾಲ ಉತ್ತಮ್ ಅವರ ನಿರ್ಮಾಣದ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಚಲನಚಿತ್ರ ನಟಿ ರಚಿತಾ ರಾಮ್ ಮೌಲ್ಯಮಾಪಕರಾಗಿರುವ ಮಜಭಾರತ ಕಾರ್ಯಕ್ರಮದಲ್ಲಿ ಅಭಿನಯಿಸಿದ ಅನುಭವ ಮಧು ಅವರದ್ದು. ’ಸಿಲ್ಲಿ ಲಲ್ಲಿ’ ಎಂಬ ಧಾರಾವಾಹಿಯ ಒಂದು ಕಂತಿನಲ್ಲಿ ಅಭಿನಯಿಸಿದ್ದಾರೆ.

ಮಧು ಅವರು ಕನ್ನಡ, ತುಳು, ಇಂಗ್ಲೀಷ್ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಮಾತನಾಡಬಲ್ಲರು. ಅಭಿನಯಿಸಬಲ್ಲರು. ಭವಿಷ್ಯದಲ್ಲಿ ತನ್ನ ಅಭಿನಯ ಪ್ರೌಢಿಮೆಯನ್ನು ಒರೆಗೆ ಹಚ್ಚುವಂತಹ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ದೂರದರ್ಶನ ಮತ್ತು ಚಲನಚಿತ್ರ ಮಾಧ್ಯಮದಲ್ಲೂ ತಮ್ಮ ಭವಿಷ್ಯದ ನೆಲೆಯನ್ನು ಕಂಡುಕೊಂಡು ಅಭಿನಯದಿಂದಲೇ ಅನವಲಂಬನದ ಜೀವನ ಸಾಗಿಸುವಂತಾಗಬೇಕು ಎಂಬುದು ಮಧು ಚಂದಪ್ಪ ಅವರ ಮನದ ಇಂಗಿತ. ಅವರ ಮನೋಭಿಲಾಶೆ ಶೀಘ್ರ ಕೈಗೂಡಲಿ ಎಂದು ಹಾರೈಸೋಣ.


Get In Touch With Us info@kalpa.news Whatsapp: 9481252093

Tags: ChikmagalurKannada News WebsiteLatest News KannadaMudigereRangabhoomiShivamoggaUday Shetty Panjimaruಕಲಾವಿದೆಚಿಕ್ಕಮಗಳೂರುಮಲೆನಾಡುಮೂಡಿಗೆರೆರಂಗಭೂಮಿಶಿವಮೊಗ್ಗ
Previous Post

ಹಳೇ ಶಿವಮೊಗ್ಗ ಭಾಗದಲ್ಲಿ ವಿಧಿಸಲಾಗಿದ್ದ ಸೀಲ್ ಡೌನ್ ತೆರವು: ಜನರ ಒತ್ತಡಕ್ಕೆ ಮಣಿದ ಆಡಳಿತ

Next Post

ಶ್ರಾವಣ ಸಾಕ್ಷಾತ್ಕಾರ-3: ನಾಗಪಂಚಮಿ ನಾಡಿಗೆ ದೊಡ್ಡದು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Image

ಶ್ರಾವಣ ಸಾಕ್ಷಾತ್ಕಾರ-3: ನಾಗಪಂಚಮಿ ನಾಡಿಗೆ ದೊಡ್ಡದು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಟಲ್ ಬ್ಯಾಡ್ಮಿಂಟನ್‌ | ಕ್ರೈಸ್ಟ್‌ಕಿಂಗ್  ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

July 29, 2025

ಮರೆಯಾಗುತ್ತಿದೆ ಮಲೆನಾಡಿನ ಪರಿಸರದೊಳಗೆ ಈ ಗಾಂಧಾರಿ ಮೆಣಸು ..!

July 29, 2025

ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ

July 29, 2025

ಕಾಡಾನೆ ದಾಳಿ | ಅಪಾರ ಬೆಳೆ ನಾಶ | ರೈತ ಕಂಗಾಲು

July 29, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಟಲ್ ಬ್ಯಾಡ್ಮಿಂಟನ್‌ | ಕ್ರೈಸ್ಟ್‌ಕಿಂಗ್  ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

July 29, 2025

ಮರೆಯಾಗುತ್ತಿದೆ ಮಲೆನಾಡಿನ ಪರಿಸರದೊಳಗೆ ಈ ಗಾಂಧಾರಿ ಮೆಣಸು ..!

July 29, 2025

ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ

July 29, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!