ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಮುಂದುವರೆದಿದ್ದು, ಹಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ.
ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿರುವ ಹರಪಲ್ಲಿ ಗ್ರಾಮದಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಬೆಟ್ಟದ ಮೇಲ್ಬಾಗದಲ್ಲೂ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಇನ್ನು, ಮಡಿಕೇರಿಯ ಸ್ಟೋನ್ ಹಿಲ್ ಕೆಳಭಾಗದಲ್ಲಿ ಭೂಕುಸಿತವಾಗಿದೆ ಎಂದು ವರದಿಯಾಗಿದೆ.

Also read: ಆಗಸ್ಟ್ 13: ಸೊರಬಕ್ಕೆ ಯುವ ವಾಗ್ಮಿ ಹಾರಿಕ ಮಂಜುನಾಥ್, ಜಾಗೋ ಭಾರತ್ ಕಾರ್ಯಕ್ರಮದಲ್ಲಿ ಭಾಗಿ
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 44 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1938.14 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1514.28 ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 35, ನಾಪೋಕ್ಲು 55.20, ಸಂಪಾಜೆ 10.50, ಭಾಗಮಂಡಲ 70, ವಿರಾಜಪೇಟೆ ಕಸಬಾ 14.80, ಹುದಿಕೇರಿ 54.80, ಶ್ರೀಮಂಗಲ 100.40, ಪೆÇನ್ನಂಪೇಟೆ 75, ಅಮ್ಮತಿ 9, ಬಾಳೆಲೆ 10, ಸೋಮವಾರಪೇಟೆ ಕಸಬಾ 37.40, ಶನಿವಾರಸಂತೆ 51.80, ಶಾಂತಳ್ಳಿ 127, ಕೊಡ್ಲಿಪೇಟೆ 55, ಕುಶಾಲನಗರ 5, ಸುಂಟಿಕೊಪ್ಪ 6 ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ (10-08-2022) ವರದಿ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2854.13 ಅಡಿಗಳು. ಕಳೆದ ವರ್ಷ ಇದೇ ದಿನ 2855.51 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 7.40 ಮಿ.ಮೀ., ಇಂದಿನ ನೀರಿನ ಒಳಹರಿವು 3860 ಕ್ಯುಸೆಕ್, ಕಳೆದ ವರ್ಷ ಇದೇ ದಿನ 5564 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 8000 ಕ್ಯುಸೆಕ್. ನಾಲೆಗೆ 100 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 4220 ಕ್ಯುಸೆಕ್. ನಾಲೆಗೆ 250 ಕ್ಯುಸೆಕ್.










Discussion about this post