ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ನಡೆಸುತ್ತಿರುವ ಡಿಸಿಎಂ ತರಬೇತಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧೀನ ಸಂಸ್ಥೆಯಾದ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋಆಪರೇಟಿವ್ ಮ್ಯಾನೇಜ್‍ಮೆಂಟ್, ಮಡಿಕೇರಿ ಸಹಕಾರ ತರಬೇತಿ ಸಂಸ್ಥೆಯು ಡಿಸಿಎಂ ರೆಗ್ಯೂಲರ್ ಹಾಗೂ ದೂರಶಿಕ್ಷಣ ತರಬೇತಿಯಲ್ಲಿ ನೂರರಷ್ಟು ಫಲಿತಾಂಶದೊಂದಿಗೆ 5 ರ್‍ಯಾಂಕ್‍ಗಳನ್ನು ಪಡೆದುಕೊಂಡಿದೆ.
ಭವ್ಯ ಎಂ.ಸಿ. 2ನೇ ರ್‍ಯಾಂಕ್, ಅಯ್ಯಪ್ಪ ಡಿ.ಕೆ. 3ನೇ ರ್ಯಾಂಕ್, ನಯನ 4ನೇ ರ್ಯಾಂಕ್, ಚೈತ್ರ ಪಿ.ಪಿ. 5ನೇ ರ್ಯಾಂಕ್ ಹಾಗೂ ದೀಪ್ತಿ ಆರ್.ಎಲ್. 8ನೇ ರ್ಯಾಂಕ್ ಪಡೆದಿದ್ದಾರೆ ಎಂದು ಕೆಐಸಿಎಂ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಆರ್.ಎಸ್.ರೇಣುಕಾ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post