ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ Harangi Reservior ಅತಿ ಶೀಘ್ರದಲ್ಲೇ ಜಲ ಕ್ರೀಡೆಗಳು ಆರಂಭವಾಗಲಿದ್ದು, ಪ್ರವಾಸಿಗರಿಗೆ ಥ್ರಿಲ್ ನೀಡುವ ಜೊತೆಯಲ್ಲಿ ಜಿಲ್ಲಾ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲು ಮುಂದಾಗಿದೆ.
ಸರ್ಕಾರ ನಿರ್ವಹಿಸುತ್ತಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್’ಗಳು, ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಿವಿಧ ಜಲಕ್ರೀಡೆ ಚಟುವಟಿಕೆಗಳನ್ನು ಪರಿಚಯಿಸಲು ವ್ಯವಸ್ಥೆಗಳು ಭರದಿಂದ ಸಾಗಿವೆ. ಹಾರಂಗಿ ಜಲಾಶಯವು ಆನೆ ಶಿಬಿರವನ್ನು ಹೊಂದಿರುವುದರಿಂದ ಸಾವಿರಾರು ಜನ ಅಲ್ಲಿಗೆ ಭೇಟಿ ನೀಡುತ್ತಾರೆ.
ಹಿನ್ನೀರಿನ ನೋಟಗಳ ಜೊತೆಗೆ, ಪ್ರವಾಸಿಗರು ಶೀಘ್ರದಲ್ಲೇ ಜೆಟ್ ಸ್ಕಿಸ್ ಮತ್ತು ಮೋರ್ಟಾ ಬೋಟ್’ಗಳಲ್ಲಿ ನೀರಿನಲ್ಲಿ ಸಾಹಸ ಪ್ರದರ್ಶಿಸಬಹುದು. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್’ಗಳ ಬೆಂಬಲದೊಂದಿಗೆ ರಾಜ್ಯ ಸರ್ಕಾರ ಹಲವಾರು ಜಿಲ್ಲೆಗಳಲ್ಲಿ ಜಲ ಕ್ರೀಡೆಗಳನ್ನು ಪರಿಚಯಿಸುತ್ತಿದ್ದು, ಅದರಂತೆ ಹಾರಂಗಿ ಹಿನ್ನೀರಿನಲ್ಲೂ ಜಲ ಕ್ರೀಡೆಗಳನ್ನು ಪರಿಚಯಿಸುತ್ತಿದೆ ಎಂದು ವರದಿಯಾಗಿದೆ.
Also read: ನನ್ನ ಪತ್ನಿಯಿಂದ ಪಾಠ ಕಲಿತವರೇ ಈಗ ಕಲ್ಲು ಹೊಡೆದಿದ್ದಾರೆ: ನಿವೃತ್ತ ಶಿಕ್ಷಕ ದಂಪತಿ ಕಣ್ಣೀರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post