ಚೆನ್ನೈ: ಪ್ರತಿಷ್ಠಿತ ನೀಟ್ ಪರೀಕ್ಷೆಯನ್ನು ತಮಿಳು ಭಾಷೆಯಲ್ಲಿ ಬರೆದ ಎಲ್ಲ ಅಭ್ಯರ್ಥಿಗಳಿಗೆ 196 ಕೃಪಾಂಕ ನೀಡುವಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಬೆಳವಣಿಗೆಯೊಂದರಲ್ಲಿ ತೀರ್ಪು ನೀಡಿದೆ.
ಈ ಕುರಿತಂತೆ ಇಂದು ತೀರ್ಪು ಪ್ರಕಟಿಸಿರುವ ನ್ಯಾಯಾಲಯ, ವೈದ್ಯಕೀಯ ಪ್ರವೇಶಿಕೆಗೆ ಸಂಬಂಧಿಸಿದ ನೀಟ್ ಪರೀಕ್ಷೆಯಲ್ಲಿ 49 ಪ್ರಶ್ನೆಗಳನ್ನು ತಪ್ಪಾಗಿ ಭಾಷಾಂತರಿಸಲಾದದ್ದು ಕಂಡು ಬಂದ ಹಿನ್ನೆಲೆಯಲ್ಲಿ ಇಂತಹ ನಿರ್ಧಾರವನ್ನು ಪ್ರಕಟಿಸಿದೆ.
ಇನ್ನು ಮುಂದಿನ ಎರಡು ವಾರಗಳಲ್ಲಿ ನೀಟ್ ಕ್ರಮಾಂಕ ಪಟ್ಟಿಯನ್ನು ಪರಿಷ್ಕಾರ ಮಾಡುವಂತೆ ಸಿಬಿಎಸ್‌ಸಿಗೆ ಆದೇಶಿಸಿರುವ ನ್ಯಾಯಾಲಯ, ಮಹತ್ವದ ತೀರ್ಪು ನೀಡಿದೆ.
ಕಳೆದ ಜುಲೈ 6ರಂದು ಮದ್ರಾಸ್ ಹೈಕೋರ್ಟ್ ಸಿಬಿಎಸ್‌ಇಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಲೋಪ ದೋಷಗಳ ವಿಷಯದಲ್ಲಿ ನೀವು ಸರ್ವಾಧಿಕಾರಿಯಂತೆ ವರ್ತಿಸುತ್ತೀರಿ ಎಂದು ಚಾಟಿ ಬೀಸಿತ್ತು.
Discussion about this post