ನವದೆಹಲಿ: ಸ್ವಾತಂತ್ರಾ ನಂತರ ಕಾಂಗ್ರೆಸ್ಸನ್ನು ಅಸ್ಥಿರಗೊಳಿಸಲು ಮಹಾತ್ಮಾ ಗಾಂಧಿ ಬಯಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಂಡಿ ಸತ್ಯಾಗ್ರಹದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಒಂದು ಮುಷ್ಠಿ ಉಪ್ಪು ಆಂಗ್ಲರ ಸಾಮ್ರಾಜ್ಯವನ್ನು ಅಲ್ಲಾಡಿಸಿತು. ಮಹಾತ್ಮಗಾಂಧಿಯವರ ಆಲೋಚನೆಗಳ ವಿರುದ್ಧ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅನ್ನು ಅಂತ್ಯಗೊಳಿಸಲು ಮಹಾತ್ಮಾ ಗಾಂಧಿಯವರು ಒಲವು ತೋರಿದರು. ನಮ್ಮ ಸರ್ಕಾರವು ಮಹಾತ್ಮಾ ಗಾಂಧಿಯ ಪಥವನ್ನು ಅನುಸರಿಸುತ್ತಿದೆ ಎಂದರು.
Tributes to Bapu and all those who marched with him to Dandi in pursuit of justice and equality.
Sharing a few thoughts on the Dandi March, the ideals of Bapu and his disdain for the Congress culture in my blog.https://t.co/QVuDNCZoXL
— Narendra Modi (@narendramodi) March 12, 2019
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮೋದಿ, ಕಾಂಗ್ರೆಸ್ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು. ಜಾತಿ, ಧರ್ಮದ ರಾಜಕೀಯ ಮಾಡುವ ಮೂಲಕ ಬಡವರ ಹಣವನ್ನು ಲೂಟಿ ಮಾಡಿರುವ ಕಾಂಗ್ರೆಸ್ ನಾಯಕರು ತಮ್ಮ ಖಾತೆಯನ್ನು ತುಂಬಿಸಿದ್ದಾರೆ. ಕಾಂಗ್ರೆಸ್ ರಾಜಕೀಯದಲ್ಲಿ ಕುಟುಂಬ ರಾಜಕೀಯಕ್ಕೆ ಜನ್ಮ ನೀಡಿದೆ. ರಾಜ್ಯದಲ್ಲಿ ಸಂವಿಧಾನದ 356 ನೆಯ ಅನುಚ್ಚೇದವನ್ನು ಹಲವು ಬಾರಿ ದುರ್ಬಳಕೆ ಮಾಡಿದ್ದು, ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಅವಮಾನಿಸಿದೆ. ಕಾಂಗ್ರೆಸ್ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ನೀಡಿದೆ ಎಂದು ಕಿಡಿ ಕಾರಿದ್ದಾರೆ.
जब एक मुट्ठी नमक ने अंग्रेजी साम्राज्य को हिला दिया !https://t.co/QVuDNCZoXL
— Narendra Modi (@narendramodi) March 12, 2019
Discussion about this post