ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಿಂದಲೇ ವಿಮಾನ ಹಾರಾಟ ಮಾಡುವ ಮಲೆನಾಡಿಗರ ಕನಸು ನನಸಾಗುವ ದಿನಗಳು ಹತ್ತಿರವಾಗಿದ್ದು, ಶಿವಮೊಗ್ಗ ಜನರನ್ನು ಭಾರೀ ನಿರೀಕ್ಷೆ ಹುಟ್ಟಿಸಿದ್ದ ಪ್ರಯಾಣ ದರದ ಮಾಹಿತಿ ಈಗ ಹೊರಬಿದ್ದಿದೆ.
ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಹಾರಾಟ ನಡೆಸಲಿರುವ ಇಂಡಿಗೋ ಸಂಸ್ಥೆ ತನ್ನ ವೆಬ್’ಸೈಟ್’ನಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದೆ.
ಇಂಡಿಗೋ ವೆಬ್’ಸೈಟ್’ನಲ್ಲಿ ಪ್ರಕಟಗೊಂಡಿರುವ ಮಾಹಿತಿಯಂತೆ ಆಗಸ್ಟ್ 31ನೆಯ ತಾರೀಕು ಬೆಂಗಳೂರಿನಿAದ ಶಿವಮೊಗ್ಗ ವಿಮಾನ ಹಾರಾಟ ಸಮಯ ಹಾಗೂ ಪ್ರಯಾಣ ದರವನ್ನು ತಿಳಿಸಿದೆ.
ಇಂಡಿಗೋ ವೆಬ್ ಸೈಟ್ ಹಾಗೂ ಮೇಕ್ ಮೈ ಟ್ರಿಪ್’ನಲ್ಲಿ ಟಿಕೇಟ್ ಬುಕ್ಕಿಂಗ್ ಆರಂಭವಾಗಿದೆ.
ಯಾವ ಸಮಯಕ್ಕೆ ಹೊರಡಲಿದೆ?
ಆಗಸ್ಟ್ 31ರಂದು ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದ ಟರ್ಮಿನಲ್ 1ರಿಂದ ಹೊರಡುವ ಇಂಡಿಗೋ ವಿಮಾನ 6ಇ 7731 ವಿಮಾನ 11.05ಕ್ಕೆ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಬಂದು ಲ್ಯಾಂಡ್ ಆಗಲಿದೆ.
ಎಷ್ಟಿದೆ ಪ್ರಯಾಣ ದರ?
ಇಂಡಿಗೋ ವೆಬ್’ಸೈಟ್’ನಲ್ಲಿ ಪ್ರಕಟಗೊಂಡಿರುವ ಮಾಹಿತಿಯಂತೆ ಆಗಸ್ಟ್ 31ರಂದು ಬೆಂಗಳೂರಿನಿAದ ಶಿವಮೊಗ್ಗಕ್ಕೆ ಬರಲಿರುವ ವಿಮಾನದಲ್ಲಿ ಪ್ರಯಾಣಿಸಲು ಎಕಾನಮಿ ಕ್ಲಾಸ್’ನಲ್ಲಿ ದರವನ್ನು ಜುಲೈ 26ರ ಸಂಜೆ 5.30ಕ್ಕೆ ಪರಿಶೀಲಿಸಿದಂತೆ 5807 ರೂ.ಗಳಲ್ಲಿ ಪ್ರಕಟಿಸಲಾಗಿದೆ. ಅದೇ, ಮೇಕ್ ಮೈ ಟ್ರಿಪ್’ನಲ್ಲಿ ಪ್ರಕಟಗೊಂಡ ಮಾಹಿತಿಯಂತೆ ಅದೇ ದಿನಕ್ಕೆ 5387 ರೂ. ಪ್ರಕಟಿಸಲಾಗಿದೆ.
ಇನ್ನು ಮೇಕ್ ಮೈ ಟ್ರಿಪ್ ವೆಬ್’ಸೈಟ್’ನಲ್ಲಿ ಜುಲೈ 26ರಂದು ಸಂಜೆ 6 ಗಂಟೆಗೆ ಪ್ರಕಟಗೊಂಡಿರುವ ಮಾಹಿತಿಯಂತೆ, ಸೆಪ್ಟೆಂಬರ್ 1ರಿಂದ ನಂತರದ ದರ 3999 ರೂ. ಆಗಿದೆ.
ಶಿವಮೊಗ್ಗ-ಬೆಂಗಳೂರು ವಿಮಾನ ಪ್ರಯಾಣ ದರ
ಇನ್ನು, ಆಗಸ್ಟ್ 31ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ಬೆಳಗ್ಗೆ 11.25ಕ್ಕೆ ಇದೇ ಇಂಡಿಗೋ ವಿಮಾನ ವಾಪಾಸ್ ತೆರಳಿದ್ದು, ಜುಲೈ 26 ರ ಸಂಜೆ 6 ಗಂಟೆಗೆ ಮೇಕ್ ಮೈ ಟ್ರಿಪ್ ವೆಬ್’ಸೈಟ್’ನಲ್ಲಿ ಪ್ರಕಟಗೊಂಡ ಮಾಹಿತಿಯಂತೆ 6021 ರೂ. ಆಗಿದೆ. ಅದೇ, ವಿಮಾನ ಪ್ರಯಾಣಕ್ಕೆ ಇಂಡಿಗೋ ವೆಬ್ ಸೈಟ್’ನಲ್ಲಿ ಪ್ರಯಾಣ ದರ 6441 ರೂ. ಪ್ರಕಟಿಸಲಾಗಿದೆ.
ಇನ್ನು, ಶಿವಮೊಗ್ಗದ ನಾಗರಿಕರೊಬ್ಬರು ಆಗಸ್ಟ್ 31ರಂದು ಬೆಂಗಳೂರಿನಿAದ ಶಿವಮೊಗ್ಗಕ್ಕೆ ಬರಲು ಇಂಡಿಗೋ ವಿಮಾನದಲ್ಲಿ ಟಿಕೇಟ್ ಬುಕ್ ಮಾಡಿದ್ದು, ಅವರು ಒಟ್ಟಾರೆಯಾಗಿ 4430 ರೂ. ಪ್ರಯಾಣದ ದರ ಪಾವತಿಸಿದ್ದಾರೆ. ಇವರು ಬುಕ್ ಮಾಡಿದ ಟಿಕೇಟ್’ನಲ್ಲಿ ಮೂಲ ಪ್ರಯಾಣ ದರ 3150, ಕೆ3 ದರ 163 ಹಾಗೂ ತೆರಿಗೆ 1117 ರೂ. ಸೇರಿ ಒಟ್ಟು 4430 ರೂ. ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post