ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ಇಂದು ನಗರದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ತಂಡ ಪಿಎಫ್’ಐ ಕಾರ್ಯಕರ್ತನ ಮನೆಯ ಮೇಲೆ ದಾಳಿ ನಡೆಸಿದ್ದು, 20 ಲಕ್ಷ ರೂ. ಅಕ್ರಮ ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಶಿವಮೊಗ್ಗದ ಮೀನು ಮಾರ್ಕೆಟ್ ಬಳಿಯಿರುವ ಶಾಹೀದ್ ಖಾನ್ ಎಂಬುವರ ಮನೆಯ ಮೇಲೆ ಬೆಳಗಿನ ಜಾವ 2 ಗಂಟೆ ವೇಳೆಗೆ ಎನ್’ಐಎ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ.
ಶಾಹಿದ್ ಖಾನ್ ಪಿಎಫ್‌ಐ ಸಂಘಟನೆಯ ಪ್ರಾದೇಶಿಕ ವಲಯದ ಅಧ್ಯಕ್ಷನಾಗಿದ್ದು ಈತ ಶಿವಮೊಗ್ಗ ಸೇರಿದಂತೆ ಇತರೆ ಎರಡು ಜಿಲ್ಲೆಗಳಿಗೆ ಮುಖ್ಯಸ್ಥನಾಗಿದ್ದಾನೆ. ಬೆಂಗಳೂರಿನ ಕೆಜೆ ಹಳ್ಳಿ ಪ್ರಕರಣಕ್ಕೆ ಸಂಬAಧಿಸಿದ ಆರೋಪಿಗಳಿಗೆ ಶಾಹಿದ್ ಖಾನ್ ಸಹಕಾರಿಯಾಗಿದ್ದಾನೆ ಎಂಬ ಆರೋಪದ ಅಡಿಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post