ಕಲ್ಪ ಮೀಡಿಯಾ ಹೌಸ್ | ಮಾಲೂರು |
ತಾಲೂಕಿನ ಗಂಗಾಪುರದಲ್ಲಿ ಶ್ರೀರಾಮಚಂದ್ರಾಪುರಮಠ ನಡೆಸುತ್ತಿರುವ ಶ್ರೀ ರಾಘವೇಂದ್ರ ಗೋಆಶ್ರಮದ ಆವರಣದಲ್ಲಿ ಇತ್ತೀಚೆಗೆ ನವೀಕರಣಗೊಂಡು ಪುನರ್ ಪ್ರತಿಷ್ಠಾಪನೆ ಮಾಡಲ್ಪಟ್ಟ ಶ್ರೀ ಸಿದ್ಧಾಂಜನೇಯಸ್ವಾಮಿ Shri Siidanjaneya ದೇವಸ್ಥಾನದ ದೃಢಕಲಶ ಮಹೋತ್ಸವ ವೇದಮೂರ್ತಿ ಅಮೃತೇಶ ಹಿರೇ ಗೋಕರ್ಣ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮದ ಯಜಮಾನತ್ವವನ್ನು ಸಮಿತಿ ಕಾರ್ಯದರ್ಶಿ ಶ್ರೀಕಾಂತ ಹೆಗಡೆ ದಂಪತಿಗಳು ವಹಿಸಿದ್ದರು. ಬೆಳಗ್ಗೆ ಗಣಪತಿ ಪೂಜೆಯೊಂದಿಗೆ ಆರಂಭವಾಗಿ, ಸಗೃಹಮಕ ಕಳಾವೃದ್ಧಿ ಹವನ ಪೂರ್ಣಾಹುತಿ, ಕಳಶಾಭಿಷೇಕ, ಮಹಾಪೂಜೆ, ಮಂಗಳಾರತಿ ನಡೆಯಿತು. ಆಗಮಿಸಿದ ಭಕ್ತರಿಗೆ ಪ್ರಸಾದಭೋಜನ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ವೇದಮೂರ್ತಿ ಅಮೃತೇಶ ಹಿರೇ ಅವರು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳ ದಿವ್ಯ ಸಂಕಲ್ಪದಿಂದ ಈ ಸಿದ್ಧಾಂಜನೇಯಸ್ವಾಮಿ ಮಂದಿರವು ನಿರ್ಮಾಣವಾಗಿದೆ. ನಮ್ಮಲ್ಲೆರಿಗೂ ಅಮೃತವನ್ನು ನೀಡುವ ಗೋವುಗಳ ಮಧ್ಯೆ ಆಂಜನೇಯಸ್ವಾಮಿ ಇರುವುದು ಇಲ್ಲಿಯ ವಿಶೇಷ. ಅಂತಹ ಶ್ರೀ ಸಿದ್ಧಾಂಜನೇಯಸ್ವಾಮಿಯು ಆಚಂದ್ರಾರ್ಕವಾಗಿ ನಂಬಿ ಬಂದ ಭಕ್ತರಿಗೆ ಅನುಗ್ರಹಿಸಲಿ ಎಂದು ಆಶಿಸಿದರು.
Also read: ಜನರ ಅವಶ್ಯಕತೆಗೆ ಸ್ಪಂದಿಸಿದಾಗ ಮಾತ್ರ ಸೇವೆ ಸಫಲ : ಐಪಿಎಸ್ ತಿಮ್ಮಪ್ಪಯ್ಯ ಮಡಿಯಾಲ್
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಶ್ಯಾಮಪ್ರಸಾದ, ಉಪಾಧ್ತಕ್ಷ ರಾಮಕೃಷ್ಣ ರಾವ್, ಕೋಶಾಧಿಕಾರಿ ರಾಮಕೃಷ್ಣ ಹೆಗಡೆ, ಗೋಆಶ್ರಮದ ವ್ಯವಸ್ಥಾಪಕ ರಾಮಚಂದ್ರ ಅಜ್ಜಕಾನ, ಉದ್ಯಮಿ ಗುರುರಾಜ ನಾಡಿಗೇರ್, ಮೊಹನಕೃಷ್ಣ, ವಂಶಿಕೃಷ್ಣ, ಕೃಷ್ಣ ಭಟ್, ಜಿ ಬಿ ಚಂದ್ರಶೇಖರ್, ಮಂಜುನಾಥ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post