ಕೋಲ್ಕತ್ತಾ: ನಮ್ಮದು ಬಿಜೆಪಿಯಂತೆ ಉಗ್ರಗಾಮಿಗಳು ಪಕ್ಷವಲ್ಲ ಎಂದು ಹೇಳುವ ಮೂಲಕ ಕಮಲ ಪಕ್ಷವನ್ನು ಉಗ್ರಗಾಮಿಗಳು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಬಿಜೆಪಿ ವಿರುದ್ದ ಕಿಡಿ ಕಾಡಿದ್ದು, ನಮಗೆ ಬಿಜೆಪಿ ರೀತಿಯಲ್ಲಿ ಹಿಂದೂಗಳು, ಕ್ರಿಶ್ಚಿಯನ್, ಮುಸ್ಲಿಂ, ಸಿಖ್ ಎನ್ನುವ ಬೇಧವಿಲ್ಲ. ನಮಗೆ ಎಲ್ಲರೂ ಒಂದೇ ಎಂದಿದ್ದಾರೆ.
ಇನ್ನು, ಮಮತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಕೆ ಮಾಡಿ ನೋಡಿ. ಪಶ್ಚಿಮ ಬಂಗಾಳದಲ್ಲಿ ಉಗ್ರರು, ಮಾವೋವಾದಿಗಳು ಹಾಗೂ ನಕ್ಸಲರು ಇದ್ದಾರೆ. ಅವರ ಮನಃಸ್ಥಿತಿಗೆ ತಕ್ಕಂತೆ ಅಲ್ಲಿ ಸಮಾನವಾದ ಸರ್ಕಾರ ನಡೆಯುತ್ತಿದೆ ಎಂದು ಮಾರ್ಮಿಕವಾಗಿ ಚಾಟಿ ಬೀಸಿದ್ದಾರೆ.
Discussion about this post