ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಇದು ಆನ್’ಲೈನ್ ಯುಗ. ಅಲ್ಲಿ ಸಿಗದೇ ಇರುವ ವಸ್ತುಗಳೇ ಇಲ್ಲ ಎನ್ನಬಹುದು. ಅದರಲ್ಲಿ ಒಳ್ಳೆಯದೂ ಇದೆ ಕಟ್ಟದ್ದೂ ಇದೆ. ಆದರೆ, ಇದನ್ನು ಸರಿಯಾಗಿ ಅಳೆದು ತೂಗುವ ಪರಿಜ್ಞಾನ ಮಾತ್ರ ಗ್ರಾಹಕರಿಗೆ ಇರಲೇಬೇಕು. ಇಲ್ಲದೇ ಹೋದಲ್ಲಿ ಎಂತಹ ಎಡವಟ್ಟು ಆಗುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ.
ಹೌದು… ಆನ್‌ಲೈನ್’ನಲ್ಲಿ ಏನು ಬೇಕಾದರೂ ಸಿಗುತ್ತದೆ, ತರಿಸಿಕೊಂಡು ತಿಂದರಾಯಿತು ಅಥವಾ ಮುಕ್ಕಿದರಾಯಿತು ಅನ್ನುವ ವರ್ಗಕ್ಕೆ ಸೇರಿದ ಬಹುಶಃ ಇಂಥವನ್ನು ತಿಂದೇ ’ವಿವೇಕ’ವೆಂಬುದು ಶೂನ್ಯವಾಗಿರಬಹುದು.
ಆನ್‌ಲೈನ್ ಅಂಗಡಿಗಳ ದೈತ್ಯ ಅಮೆಜಾನ್‌ನಲ್ಲಿ ಸಿಗದ ವಸ್ತುವಿಲ್ಲ. ನಮ್ಮೂರಲ್ಲಿ ತ್ಯಾಜ್ಯವೆಂದು ಪರಿಗಣಿಸಲಾದ ಬೂದಿ, ತೆಂಗಿನಕಾಯಿ ಚಿಪ್ಪನ್ನೂ ಅಮೆಜಾನ್ ಮಾರುತ್ತದೆ. ಅಂತೆಯೇ ಹೋಮ ಹವನ, ಶುದ್ಧಿ ಕಾರ್ಯಗಳಿಗೆ ಅಗತ್ಯವಿರುವ ಗೋಮಯದ (ಸೆಗಣಿ) ಬಿಲ್ಲೆಗಳನ್ನೂ ಮಾರುತ್ತದೆ.
ಇಂತಹ ಸೆಗಣಿಯ ಕೇಕನ್ನು ತರಿಸಿಕೊಂಡ ಗ್ರಾಹಕನೊಬ್ಬ ಅದನ್ನು ತಿಂದು ಟೇಸ್ಟ್ ಹೇಗಿದೆ ಎಂದು ನೋಡಿದ್ದಾನಂತೆ. ಸೆಗಣಿಯ ಕೇಕನ್ನು ತಿಂದಿದ್ದು ಮಾತ್ರವಲ್ಲ, ಅದು ಹೇಗಿತ್ತು ಎಂದು ರಿವ್ಯೂ ಸೆಕ್ಷನನಲ್ಲಿ ಹಾಕಿಕೊಂಡು ತನ್ನ ಎಡವಟ್ಟನ್ನು ತಾನೇ ಜಗಜ್ಜಾಹೀರು ಮಾಡಿಕೊಂಡಿದ್ದಾನೆ.
-ಸಿಎಸ್’ಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post