ಕಲ್ಪ ಮೀಡಿಯಾ ಹೌಸ್ | ಮೇಲುಕೋಟೆ |
ಭಾರತೀಯ ಸನಾತನ ಪರಂಪರೆಗೆ ಆಚಾರ್ಯತ್ರಯರಾದ ಶ್ರೀ ಶಂಕರ, ರಾಮಾನುಜ ಮತ್ತು ಮಧ್ವಾಚಾರ್ಯರ ಕೊಡುಗೆ ಅನನ್ಯವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ.ಎಂ.ವಿ. ವೆಂಕಟೇಶ್ ಬಣ್ಣಿಸಿದರು.
ಮೇಲುಕೋಟೆಯ #Melukote ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಂಥ ಲೋಕಾರ್ಪಣೆ, ವಿದ್ವತ್ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Also Read>> ಶಿವಮೊಗ್ಗ | ವಿಶೇಷ ಅಲಂಕಾರ, ಪೂಜೆಯೊಂದಿಗೆ ವೈಕುಂಠ ಏಕಾದಶಿ ಆಚರಣೆ
ಆಚಾರ್ಯ ಶ್ರೀ ರಾಮಾನುಜರ ಜಾಚಾರ್ಯರ ಕರ್ಮಭೂಮಿ ಮೇಲುಕೋಟೆ. ಈ ದಿವ್ಯಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಜರಾಯಿ ಸಂಕಲ್ಪ ಮಾಡಿದೆ. ಅದನ್ನು ಶೀಘ್ರವೇ ಅನುಷ್ಠಾನಗೊಲಿಸಲಿದೆ ಎಂದವರು ಭರವಸೆ ನೀಡಿದರು. ವಿಧಾನ ಸೌಧದ ಪಕ್ಕದಲ್ಲೇ ಕರ್ನಾಟಕದ ಎಲ್ಲ ದೇವಾಲಯಗಳ #Temple ಮಾಹಿತಿ ನೀಡುವ ಹೊಯ್ಸಳ #Hoysala ಭವನ ನಿರ್ಮಿಸಲು ಸರ್ಕಾರ ಮುಂದಾಗಿರುವುದು ಆಶಾದಾಯಕವಾಗಿದೆ ಎಂದವರು ನುಡಿದರು.

ಪ್ರಶಸ್ತಿ ಪ್ರದಾನ
ಧಾರ್ಮಿಕ ಮತ್ತು ಸಾಂಪ್ರದಾಯಿಕ ರಂಗಕ್ಕೆ ವಿಶೇಷ ಸೇವೆ ಮಾಡಿದ ಸ್ಥಾನೀಕಂ ನರಸಿಂಹಾಚಾರ್, ವಿದ್ವಾನ್ ಎಂ.ಕೆ.ಶ್ರೀನಿವಾಸ ಅಯ್ಯಂಗಾರ್, ವಿದ್ವಾನ್ ಆರ್. ಕೃಷ್ಣಯ್ಯಂಗಾರ್ ಅವರಿಗೆ ಕೊಡಲಾದ ಮರಣೋತ್ತರ ಕೈಂಕರ್ಯನಿಧಿ ಪ್ರಶಸ್ತಿಯನ್ನು ಶ್ರೀರಾಮನ್. ಎಂ.ಕೆ.ರಾಮಸ್ವಾಮಿ ಅಯ್ಯಂಗಾರ್ ಸ್ವೀಕರಿಸಿದರು.
ರಾಮಾನುಜರ ಶ್ರೀಭಾಷ್ಯ ಕಿರುಪರಿಚಯ, ಹಸ್ತಪ್ರತಿ ಸೂಚಿಪಟ್ಟಿ ಸ್ತೋತ್ರ-15 , ತತ್ವದೀಪ 2023 ಗ್ರಂಥಗಳನ್ನು ಇದೇ ಸಂದರ್ಭ ಅತಿಥಿಗಳು ಲೋಕಾರ್ಪಣೆ ಮಾಡಿದರು.
ರಾಜ್ಯಮಟ್ಟದ ದತ್ತಿನಿಧಿ ಸಂಸ್ಕೃತ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಕುಲಸಚಿವ ಕುಮಾರ್, ಸಂಸ್ಕೃತ ವಿವಿ ಕುಲಸಚಿವ ವಿಶ್ವನಾಥ ಹಿರೇಮಠ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ವಿದುಷಿ ರಮಾ ಶ್ರೀನಿವಾಸನ್, ಡಾ.ಎ ಪುಷ್ಪಾ ಅಯ್ಯಂಗಾರ್, ಡಾ.ಎ. ವೈದೇಹಿ ಅಯ್ಯಂಗಾರ್, ಜಯತೀರ್ಥ ಇತರರು ಹಾಜರಿದ್ದರು.
ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ದತ್ತಿನಿಧಿ ಸಂಸ್ಕೃತ ಸ್ಪರ್ಧೆ, ಗ್ರಂಥಲೋಕಾರ್ಪಣೆ ವಿದ್ವತ್ ಸನ್ಮಾನ ಸಂದರ್ಭ ಎಂ.ಕೆ. ರಾಮಸ್ವಾಮಿ ಅಯ್ಯಂಗಾರ್, ಶ್ರೀರಾಮನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಎಂ.ವಿ. ವೆಂಕಟೇಶ್, ವಿಶ್ವನಾಥ ಹಿರೇಮಠ್, ಶಿವಾನಂದಮೂರ್ತಿ, ಕುಮಾರ್, ಶ್ರೀನಿವಾಸ್, ಸಂತೋಷ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post