ಕಲ್ಪ ಮೀಡಿಯಾ ಹೌಸ್ | ವೈಟ್ ಫೀಲ್ಡ್(ಬೆಂಗಳೂರು) |
ಕಾಲು ಊತ ಬಂದು ನಡೆಯಲಾಗದೇ ಹಾಸಿಗೆಯಲ್ಲೇ ಬಳಲುತ್ತಿದ್ದ 22 ವರ್ಷದ ಯುವತಿಯೊಬ್ಬರಿಗೆ ಇಲ್ಲಿನ ಮೆಡಿಕವರ್ #MediCoverHospital ಆಸ್ಪತ್ರೆಯ ಹೃದಯ ತಜ್ಞ ಡಾ. ರಾಮ್ ನರೇಶ್ ಸೌದ್ರಿ ಅವರು ಶಸ್ತ್ರಚಿಕಿತ್ಸೆ ನಡೆಸಿ ಕೇವಲ ಎರಡೇ ದಿನದಲ್ಲಿ ಸಹಜ ಸ್ಥಿತಿಗೆ ಬರುವಂತೆ ಮಾಡುವ ಮೂಲಕ ಮ್ಯಾಜಿಕ್ ಮಾಡಿದ್ದಾರೆ.
22 ವರ್ಷದ ಯುವತಿಯೊಬ್ಬರಿಗೆ ಕಾಲಿನಲ್ಲಿ ಊತ ಶುರುವಾಗಿ, ನೋವಿನಿಂದ ಹಾಸಿಗೆಯಿಂದ ಮೇಲೆ ಏಳಲೂ ಸಹ ಕಷ್ಟವಾಗುತ್ತಾ ನರಳುತ್ತಿದ್ದರು. ಸುಮಾರು 12 ದಿನಗಳಿಗೂ ಹೆಚ್ಚು ಕಾಲ ಹಾಸಿಗೆಯಿಂದ ಮೇಲೇಳಲು ಕಷ್ಟ ಪಡುತ್ತಿದ್ದರು. ಮಾತ್ರವಲ್ಲ ನೋವು ಹೆಚ್ಚಾಗಿ ಉಸಿರಾಟದ ತೊಂದರೆ ಸಹ ಆರಂಭವಾಗಿ ಆಕೆ ನರಳುತ್ತಿದ್ದರು. ಹೀಗಾಗಿ, ಮೆಡಿ ಕವರ್ ಆಸ್ಪತ್ರೆಗೆ ಯುವತಿಯನ್ನು ಕರೆತಂದ ಪೋಷಕರು ಹೃದಯ ತಜ್ಞ #Cardiologist ಡಾ. ರಾಮ್ ನರೇಶ್ ಸೌದ್ರಿ ಅವರನ್ನು ಭೇಟಿಯಾದರು.
Also Read>> Appealing and proficient Shreya Kolathaya
ಯುವತಿಯ ಆರೋಗ್ಯ ತಪಾಸಣೆ ನಡೆಸಿದ ಡಾ.ಸೌದ್ರಿ ಅವರಿಗೆ, ಆಕೆಯ ಎಡ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಹೃದಯದಿಂದ ಶ್ವಾಸಕೋಶದ #Lungs ಪಲ್ಮನರಿವರೆಗೂ ಬ್ಲಾಕೇಜ್ ಆಗಿರುವುದು ತಿಳಿದುಬಂದಿದೆ. ಅಲ್ಲದೇ ಎಡಗಾಲಿಯ ರಕ್ತನಾಳ ಸಂಪೂರ್ಣ ಹೆಪ್ಪುಗಟ್ಟಿದ್ದು, ರಕ್ತ ಸಂಚಲನ ಫುಲ್ ಬಂದ್ ಆಗಿತ್ತು.
ಹೀಗಾಗಿ, ರಕ್ತ ಕರಗಿಸಲು ಇಂಜೆಕ್ಚನ್ ನೀಡಿದರೂ ರೋಗಿಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಬಳಿಕ ಅವರಿಗೆ ಸಿಟಿ ವಿನೋಗ್ರಾಮ್ ನಡೆಸಲಾಯ್ತು. ಅದರಲ್ಲಿ ಅವರಿಗೆ ಥ್ರಂಬೋಸಿಸ್ #Thrombosis ಖಾಯಿಲೆ ಇರುವುದು ತಿಳಿದು ಬಂದಿದೆ. ಅದಕ್ಕಾಗಿ ಪಲ್ಮನರಿ ಎಂಬೋಲೆಕ್ಟಮಿ ಹಾಗೂ ವೀಸನ್ ಥ್ರಂಬೆಕ್ಟಮಿ ಅಪರೇಷನ್ ಮಾಡಿಸುವ ಅಗತ್ಯತೆಯನ್ನು ಡಾ.ಸೌದ್ರಿ ರೋಗಿಗೆ ತಿಳಿಸಿದರು.
ಯುವತಿಯ ಆರೋಗ್ಯ ಸಮಸ್ಯೆಗೆ ಕಾರಣ ಏನು ಎಂದು ಹುಡುಕುತ್ತಿದ್ದ ವೈದ್ಯರಿಗೆ ತಿಳಿದುಬಂದಿದ್ದು ಅವರು ಹಾರ್ಮೋನಲ್ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದಾಗಿದೆ. ಅದರ ಪರಿಣಾಮವಾಗಿ ರೋಗಿಯೂ ಇಷ್ಟೊಂದು ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗೀ ಅವರಿಗೆ ಅಪರೇಷನ್ ನಡೆಸಲಾಯಿತು.ಮೊದಲಿಗೆ ಶ್ವಾಸಕೋಶದಲ್ಲಿ ಉಂಟಾಗಿರುವ ರಕ್ತದ ಕ್ಲಾಟನ್ನು ತೆಗೆದು ಬಳಿಕ ಐವಿಸಿ ಫಿಲ್ಟರ್ ಹಾಕಿ ಎಡಗಾಲಿನಲ್ಲಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆದು ಹಾಕಿಲಾಯಿತು. ಬಳಿಕ ಅವರನ್ನು ಐಸಿಯು ಇಂದ ವಾರ್ಡ್’ಗೆ ಒಂದೇ ದಿನದಲ್ಲಿ ಶಿಫ್ಟ್ ಮಾಡಲಾಗಿದೆ. ಮರುದಿನವೇ ಅವರು ಎಂದಿನಂತೆ ನಡೆಯುವುದಕ್ಕೆ ಅವಕಾಶವಾಗಿದೆ.
ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಎಂದಿನಂತೆ ಯುವತಿಯೂ ತಮ್ಮ ದೈನಂದಿನ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೃದಯ ತಜ್ಞ ಡಾ. ರಾಮ್ ನರೇಶ್ ಸೌದ್ರಿ ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post