ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈಕುಂಠ ಏಕಾದಶಿ #Vaikunta Ekadashi ಹಿನ್ನೆಲೆ ನಗರದ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ನಡೆಯಿತು. ಭಕ್ತರು ಮುಂಜಾನೆ ನಸುಕಿನಿಂದಲೇ ದೇವಾಲಯಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಮಂದಿರ ಹಾಗೂ ವೆಂಕಟೇಶ ನಗರ ಲಕ್ಷ್ಮಿ ಪದ್ಮಾವತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿ, ಜಯನಗರದ ಶ್ರೀರಾಮ ಮಂದಿರ, ನವುಲೆಯ ವೆಂಕಟರಮಣ ದೇವಾಲಯ, ಕೋಟೆ ಶ್ರೀರಾಮಾಂಜನೇಯ ದೇವಾಲಯ, ದೇವಗಿರಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸೇರಿ ಹಲವು ದೇವಾಲಯಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ಜರುಗಿತು.
Also read: ಕನ್ನಡ ಮಾಧ್ಯಮದ ಪ್ರಶ್ನೆ ಪತ್ರಿಕೆಗಳಲ್ಲಿ ಕೆಪಿಎಸ್‌ಸಿ ಎಡವಟ್ಟು | ಪುರುಷೋತ್ತಮ ಬಿಳಿಮಲೆ ಖಂಡನೆ
ವೈಕುಂಠ ಏಕಾದಶಿ ವ್ರತವನ್ನು ಮುಕ್ಕೋಟಿ ಏಕಾದಶಿ, ಪುತ್ರದಾ ಏಕಾದಶಿ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ದೇಶದಾದ್ಯಂತ ಹಿಂದೂಗಳು ಈ ಪವಿತ್ರ ದಿನವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ. ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿಯೊಂದು ವಿಷ್ಣು ದೇವನ ದೇವಾಲಯದಲ್ಲೂ ವೈಕುಂಠ ಏಕಾದಶಿ ದಿನದಂದು ವಿಶೇಷ ಪ್ರಾರ್ಥನೆ, ಪೂಜೆ – ಪುನಸ್ಕಾರಗಳು, ಯಜ್ಞಗಳು, ಪ್ರವಚನೆ ಹಾಗೂ ವಿವಿಧ ರೀತಿಯಾದ ಧಾರ್ಮಿಕ ಆವಚರಣೆಗಳನ್ನು ನಡೆಸಲಾಗುತ್ತದೆ.
ವೈಕುಂಠ ಏಕಾದಶಿ ದಿನ ಭಕ್ತರ ಕೋರಿಕೆ ಈಡೇರಿಸಲು ಸಾಕ್ಷಾತ್ ವಿಷ್ಣುವೇ ಲಕ್ಷ್ಮೀ ಸಹಿತನಾಗಿ ಭೂಲೋಕಕ್ಕೆ ಬರುತ್ತಾನೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿದ್ದು, ಈ ದಿನ ಏಕಾದಶಿ ವ್ರತ ಕೈಗೊಂಡು ದೇವರ ದರ್ಶನ ಪಡೆದಲ್ಲಿ ಮೋಕ್ಷ ಪ್ರಾಪ್ತಿ ಎಂಬ ಪ್ರತೀತಿಯೂ ಇದೆ.
ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಅಲಂಕಾರದ ಚಿತ್ರಗಳು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post