ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಮೃತಪಟ್ಟ ಮಗಳ ಶವದೊಂದಿಗೆ ತಾಯಿಯೊಬ್ಬರು ನಾಲ್ಕು ದಿನ ಕಳೆದಿದ್ದು, ಈ ಭಯಾನಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯದ ನ್ಯೂ ತಮಿಳು ಕಾಲೋನಿಯಲ್ಲಿ ಘಟನೆ ನಡೆದಿದ್ದು, ನಾಗಮ್ಮ ಎಂಬ ಮಹಿಳೆಯೇ ಶವದ ಜೊತೆ ನಾಲ್ಕು ದಿನ ಕಳೆದ ಮಹಿಳೆ. ರೂಪ ಎಂಬ 30 ವರ್ಷದ ಮಹಿಳೆ ಸೋಮವಾರ ಮೃತಪಟ್ಟಿದ್ದು, ಈಕೆಯ ತಾಯಿ ಯಾರಿಗೂ ವಿಚಾರ ತಿಳಿಸದೇ ಶವದ ಜೊತೆಯಲ್ಲೇ ನಾಲ್ಕು ದಿನ ಮನೆಯಲ್ಲೇ ಕಳೆದಿದ್ದಾರೆ.

ಈಕೆ ಮಗಳ ಸಾವಿನ ವಿಚಾರ ಯಾರಿಗೂ ತಿಳಿಸಿರಲಿಲ್ಲ. ಮನೆಯ ಬಾಗಿಲು ಹಾಕಿಕೊಂಡು ಮನೆ ಒಳಗೆ ಇದ್ದರು ಎಂದು ಹೇಳಲಾಗಿದ್ದು, ಮನೆಯಲ್ಲೇ ಇದ್ದ ಮೃತದೇಹ ಕೊಳೆತು ದುರ್ವಾಸನೆ ಬರಲು ಆರಂಭಿಸಿದೆ. ಆರಂಭದಲ್ಲಿ ಇಲಿ, ಹೆಗ್ಗಣ ಸತ್ತಿರಬಹುದು ಎಂದುಕೊಂಡು ಹುಡುಕಾಡಿದ್ದ ಅಕ್ಕಪಕ್ಕದವರು ಯಾವಾಗ ನಾಗಮ್ಮ ಮತ್ತು ರೂಪ ಮನೆಯಿಂದ ಹೊರಬರದೆ ಇದ್ದರೂ ಆಗ ಅನುಮಾನಗೊಂಡಿದ್ದಾರೆ. ಬಳಿಕ ಮಿಕ್ಸಿ ರಿಪೇರಿಗೆಂದು ಬಂದವನನ್ನ ಕರೆದು ಮನೆಯ ಬಾಗಿಲು ಹೊಡೆಸಿದ ಸ್ಥಳೀಯರು ಮನೆ ಒಳಗಿನ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದರು. ಮೃತಪಟ್ಟ ರೂಪಾಳ ಶವದ ಜೊತೆ ನಾಗಮ್ಮ ಕುಳಿತಿದ್ದಳು. ಆತಂಕದ ನಡುವೆಯೇ ಪೂರ್ವ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದ ಸ್ಥಳೀಯರು ಪೊಲೀಸರ ಸಹಾಯದೊಂದಿಗೆ ಮೃತದೇಹ ರವಾನಿಸಿದ್ದರು.
Also read: ಕುವೆಂಪು ವಿವಿಯಲ್ಲಿ ತಂಬಾಕು ರಹಿತ ದಿನಾಚರಣೆಕುವೆಂಪು ವಿವಿಯಲ್ಲಿ ತಂಬಾಕು ರಹಿತ ದಿನಾಚರಣೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















