ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಅಂಗರಗುಂಡಿ ಬಳಿ ಗೂಡ್ಸ್ ರೈಲಿನಡಿ ಬಿದ್ದು ಎಮ್ಮೆಗಳು ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಗೂಡ್ಸ್ ರೈಲು ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ಹೋಗುತ್ತಿದ್ದಾಗ ಈ ಅವಘಢ ಸಂಭವಿಸಿದೆ. ಕದ್ರಿ ಅಗ್ನಿಶಾಮಕ ದಳದವರು ಮೂರು ಎಮ್ಮೆಗಳನ್ನು ರಕ್ಷಿಸಿದ್ದು, ಸತತ ಮೂರು ಗಂಟೆ ಕಾರ್ಯಾಚರಣೆ ನಡೆದಿದೆ. ಕೆಲವು ಎಮ್ಮೆಗಳು ಸುಮಾರು 25 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post