ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ನಗರದಲ್ಲಿ ಸಂಭವಿಸಿದ ಆಟೋರಿಕ್ಷಾದಲ್ಲಿನ ಕುಕ್ಕರ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಉಗ್ರ ಶಾರೀಕ್, ಸಿಮ್ ಕಾರ್ಡ್ ಖರೀದಿಸಲು ನಕಲಿ ಆಧಾರ್ ಕಾರ್ಡ್ ಬಳಸಿರುವ ಕುರಿತಾಗಿ ವರದಿಯಾಗಿದೆ.
ಸಿಮ್ ಕಾರ್ಡ್ ಖರೀದಿಸಲು ಆಧಾರ್ ವಿವರಗಳನ್ನು ಬಳಸಿದ್ದ ಎನ್ನಲಾದ ಉದಗಮಂಡಲಂನ ತುಮ್ಮನಟ್ಟಿಯ ಸುರೇಂದ್ರನ್ (28) ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತಂತೆ ಪೊಲೀಸ್ ಆಯುಕ್ತ ವಿ. ಬಾಲಕೃಷ್ಣನ್ ಅವರು ಮಾಧ್ಯಮಗಳಿಗೆ ಮಾತನಾಡಿದ್ದು, ಸುರೇಂದ್ರನ್ ಅವರು ಸಿಂಗಾನಲ್ಲೂರು ಬಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಶಾರಿಕ್ ಅವರೊಂದಿಗೆ ವಸತಿ ನಿಲಯದಲ್ಲಿ ಕೊಠಡಿ ಹಂಚಿಕೊAಡಿದ್ದರು ಎಂದು ಹೇಳಲಾಗಿದೆ.
ಶಾರೀಕ್ ಸೆಪ್ಟೆಂಬರ್’ನಲ್ಲಿ ಕೊಯಮತ್ತೂರ್’ಗೆ ಭೇಟಿ ನೀಡಿದ್ದರು. ಸುರೇಂದ್ರನ್ ಎಂಬ ವ್ಯಕ್ತಿಯೊಂದಿಗೆ ಕೆಲವು ದಿನಗಳ ಕಾಲ ವಸತಿ ನಿಲಯದಲ್ಲಿ ತಂಗಿದ್ದ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post