ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿನ್ನೆ ತಡರಾತ್ರಿ ಮೆಗ್ಗಾನ್ ಆಸ್ಪತ್ರೆ McGann Hospital ಸುಮಾರು 150ಕ್ಕೂ ಅಧಿಕ ಡ್ಯೂಟಿ ಡಾಕ್ಟರ್’ಗಳು ಏಕಾಏಕಿ ಮುಷ್ಕರ ನಡೆಸಿದ್ದು, ವಿವಿದ ಬೇಡಿಕೆಗಳನ್ನು ಇರಿಸಿರುವ ಘಟನೆ ನಡೆದಿದೆ.
ಅಪಘಾತಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಐಸಿಯುನಲ್ಲಿ ಮೃತಪಟ್ಟಿದ್ದು, ಆತನ ಸಾವಿಗೆ ವೈದ್ಯರೇ ಕಾರಣ ಎಂದು ಕೆಲವರು ಹಲ್ಲೆ ನಡೆಸಿರುವುದಾಗಿ ವೈದ್ಯರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಮುಷ್ಕರ ನಡೆಸಲಾಗಿದೆ.
ಅಪಘಾತಕ್ಕೊಳಗಾಗಿದ್ದ ವ್ಯಕ್ತಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಮತ್ತೆ ಮೆಗ್ಗಾನ್’ಗೆ ಕರೆತರಲಾಗಿತ್ತು. ಭಾನುವಾರ ರಾತ್ರಿ ಅಬ್ದುಲ್ ರಸೀದ್ ಅಸುನೀಗಿದ್ದು, ಮೆಗ್ಗಾನ್ ವೈದ್ಯರ ನಿರ್ಲಕ್ಷ್ಯದಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂದು ಮೃತನ ಸಂಬಂಧಿಗಳು ಆರೋಪಿಸಿ, ಮಹಿಳಾ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
Also read: ಸಿಮ್ ಕಾರ್ಡ್ ಖರೀದಿಸಲು ನಕಲಿ ದಾಖಲೆ ಬಳಸಿದ್ದ ಉಗ್ರ ಶಾರೀಕ್: ಉದಗಮಂಡಲಂನ ಓರ್ವ ವ್ಯಕ್ತಿ ವಿಚಾರಣೆ
ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ದೊಡ್ಡಪೇಟೆ ಪಿಐ ಅಂಜನ್ ಕುಮಾರ್, ಡೀನ್ ಡಾ. ವಿರೂಪಾಕ್ಷಪ್ಪ, ಮೆಗ್ಗಾನ್ ಅಧೀಕ್ಷಕ ಡಾ. ಶ್ರೀಧರ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ವೈದ್ಯರು, ಡ್ಯೂಟಿ ಡಾಕ್ಟರ’ಗಳಿಗೆ ರಕ್ಷಣೆ ನೀಡಬೇಕು, ಸಿಬ್ಬಂದಿ ಕೊರತೆ ನೀಗಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಲಾಯಿತು.
ಮುಷ್ಕರ ಹಿನ್ನೆಲೆಯಲ್ಲಿ ಡ್ಯೂಟಿ ಡಾಕ್ಟರ್’ಗಳಿಗೆ ಆಸ್ಪತ್ರೆಯಲ್ಲಿ ರಕ್ಷಣೆ ನೀಡುವ ಸಲುವಾಗಿ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post