ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಶಿಕ್ಷಕರ ಹಾಗೂ ಪದವೀಧರರಿಗೆ ಧ್ವನಿಯಾಗಬಲ್ಲ ಅಭ್ಯರ್ಥಿಗಳು ಎಸ್.ಎಲ್. ಬೋಜೇಗೌಡ್ರು ಮತ್ತು ಡಾ. ಧನಂಜಯ ಸರ್ಜಿ #Dr. Dhananjaya Sarji ಅವರು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವುದು ಖಚಿತ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ #Kota Shrinivasa Poojari ಹೇಳಿದರು.
ಇಲ್ಲಿನ ದಕ್ಷಿಣ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಪೂರ್ವಭಾವಿಯಾಗಿ ಮಂಡಲ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಕರ ಕ್ಷೇತ್ರದದಲ್ಲಿ ಗಂಭೀರ ಸಮಸ್ಯೆಗಳಿವೆ, ಹಾಗೆಯೇ ಪದವೀಧರ ಕ್ಷೇತ್ರದಲ್ಲೂ ಇವೆ, ಸಮಸ್ಯೆಗಳ ಪರಿಹಾರಕ್ಕಾಗಿ ಪರಿಷತ್ ನಲ್ಲಿ ಸಮರ್ಥರು ಬೇಕು, ಆ ಸಮರ್ಥರೇ ಎಸ್.ಎಲ್.ಬೋಜೇಗೌಡ್ರು, ಇನ್ನು ಮೇಲ್ಮನೆ ಚಿಂತಕರ ಚಾವಡಿಯಾಗಿದ್ದು, ಅಂತಹ ಚಿಂತನಾಶೀಲ ವ್ಯಕ್ತಿತ್ವ ಹೊಂದಿದವರು ಡಾ.ಧನಂಜಯ ಸರ್ಜಿ ಅವರು. ಇಂತಹ ಸಮರ್ಥ, ಸುಸಂಸ್ಕೃತ, ವಿದ್ಯಾವಂತರು, ಬುದ್ಧಿವಂತರು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧವಾದ ಸೇವೆ ಸಲ್ಲಿಸಿದವರು. ಈ ಮೈತ್ರಿಯ ಇಬ್ಬರೂ ಅಭ್ಯರ್ಥಿಗಳನ್ನು ಮತದಾರರು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್, ಮತದಾರರಿಗೆ ಪರಿಷತ್ ಚುನಾವಣೆಯ ಮತದಾನದ ಮಹತ್ವ ಮತ್ತು ಅರಿವನ್ನು ಮೂಡಿಸಬೇಕು, ವಾರ್ಡ್ ವಾರು ಮತಪಟ್ಟಿಗಳನ್ನು ಪಡೆದು ಪ್ರತಿ ಮತದಾರರನ್ನೂ ತಲುಪಬೇಕು, ಈ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕಿದೆ ಎಂದು ಹೇಳಿದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್. ಎಲ್. ಭೋಜೇಗೌಡ್ರು, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ, ಶಿಕ್ಷಕರ ಕ್ಷೇತ್ರದ ಸಂಚಾಲಕರು ಹಾಗೂ ಶಾಸಕರಾದ ಪ್ರತಾಪ್ ಸಿಂಹ ನಾಯಕ್ , ಸಹ ಸಂಚಾಲಕರಾದ ಡಾ.ಎ.ಮಂಜುಳಾ ರಾವ್, ನೈರುತ್ಯ ಪದವೀಧರ ಕ್ಷೇತ್ರದ ಸಹ ಸಂಚಾಲಕರಾದ ವಿಕಾಸ್ ಪುತ್ತೂರ್, ಮಂಡಲ ಸಂಚಾಲಕರಾದ ಜಯಕುಮಾರ್, ಸಹ ಸಂಚಾಲಕ ರಘುವೀರ್ ಜೆ., ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ, ರಾಜ್ಯ ಪ್ರಕೋಶಗಳ ಸಂಯೋಜಕರಾದ ಎಸ್. ದತ್ತಾತ್ರಿ ಹಾಜರಿದ್ದರು, ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post