ಕಲ್ಪ ಮೀಡಿಯಾ ಹೌಸ್ | ಮಂತ್ರಾಲಯ |
ಭಕ್ತರ ಪಾಲಿನ ಕಾಮಧೇನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ Shri Subudhendra Thirth ಹೊರನಾಡು ಕ್ಷೇತ್ರದ ವತಿಯಿಂದ ರಜತಪೀಠ ಸಮರ್ಪಣೆ ಮಾಡಲಾಯಿತು.
ಮಂತ್ರಾಲಯದ ಶ್ರೀಮಠದಲ್ಲಿ ಇಂದು ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೊರನಾಡು ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಭೀಮೇಶ್ವರ ಜೋಷಿ ದಂಪತಿಗಳು, ವಿಶೇಷವಾಗಿ ತಯಾರಿಸಲಾಗಿರುವ ಬೆಳ್ಳಿಯ ಪೀಠವನ್ನು ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಸಮರ್ಪಣೆ ಮಾಡಿದರು.
ಈ ವೇಳೆ ಆರ್ಶೀವಚನ ನೀಡಿ ಮಾತನಾಡಿದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, ಇಂದಿನ ದಿನವನ್ನು ಶ್ರೀಮಠದಲ್ಲಿ ಐತಿಹಾಸಿಕ ಕ್ಷಣಗಳೆಂದು ನಾವು ಪರಿಗಣಿಸುತ್ತೇವೆ. ಮಧ್ವ ಪರಂಪರೆಯ ಗುರುಗಳ ಮಾರ್ಗದರ್ಶನದಂತೆ ಶ್ರೀಮಠ ಮುನ್ನಡೆಯುತ್ತಿದೆ. ಮಧ್ವಾಚಾರ್ಯರಿಂದ ಮೊದಲ್ಗೊಂಡು ನೂರಾರು ವರ್ಷಗಳ ಕಾಲ ಅರಸೊತ್ತಿಗೆಗಳ ಮೂಲಕ ಶ್ರೀಮಠಕ್ಕೆ ವಿಶೇಷ ಕಾಣಿಕೆಗಳು ಸಂದಿವೆ. ರಜತ, ಚಿನ್ನ, ವಜ್ರ ವೈಢೂರ್ಯಗಳ ಕಾಣಿಕೆ, ರಥಗಳನ್ನು ಹಿಂದಿನ ಅರಸರು ನೀಡುವ ಮೂಲಕ ಗೌರವಿಸುತ್ತಿದ್ದರು ಎಂದು ಹಿಂದಿನ ವಿಚಾರಗಳನ್ನು ಪ್ರಸ್ತಾಪಿಸಿದರು.
Also read: ಅವರ ಹೆಣ ತಗೊಂಡು ಏನು ಮಾಡೋದು: ಹೀಗೆಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದು ಯಾರ ವಿರುದ್ಧ
ಸನ್ಯಾಸಿಗಳಾದ ನಾವು ಎಲ್ಲ ವೈಭವಗಳನ್ನು ತ್ಯಜಿಸಿ, ಕೇವಲ ಧರ್ಮ ರಕ್ಷಣೆ, ಪ್ರಚಾರ, ಪೂಜಾ ಕೈಂಕರ್ಯಗಳು ಹಾಗೂ ಭಕ್ತರ ಹಿತ ಕಾಯುವುದು ನಮ್ಮ ಕರ್ತವ್ಯ. ಆದರೆ, ಪರಂಪರೆಯಿAದ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ಪಾಲಿಸುವುದೂ ಸಹ ನಮ್ಮ ಕರ್ತವ್ಯವಾಗಿದೆ. ಇಲ್ಲಿ ವ್ಯಕ್ತಿ ಪೂಜೆಯಾಗಬಾರದು. ಬದಲಾಗಿ, ಭಕ್ತರ ಭಾವನೆ, ಗೌರವ, ಕಷ್ಟ ಸುಖಗಳನ್ನು ನೀಗಿಸುವುದು ಶ್ರೀಮಠದ ಮೊದಲ ಆದ್ಯತೆ ಎಂದರು.
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಭೀಮೇಶ್ವರ ಜೋಷಿ ಅವರು ಅತ್ಯಂತ ಶ್ರದ್ಧೆ, ಅಭಿಮಾನ ಹಾಗೂ ಭಕ್ತಿಯಿಂದ ಇಂದು ರಜತ ಪೀಠವನ್ನು ಶ್ರೀಮಠಕ್ಕೆ ಸಮರ್ಪಿಸಿದ್ದಾರೆ. ಇದನ್ನು ನಮ್ಮ ಅಂತರ್ಯಾಮಿಯಾದ ಪೂರ್ವಗುರುಗಳಿಗೆ ಹಾಗೂ ನಮ್ಮ ಉಪಾಸನಾ ಮೂರ್ತಿಯಾದ ಶ್ರೀಮೂಲರಾಮನಿಗೆ ಸಮರ್ಪಿಸಿದ್ದೇವೆ ಎಂದರು.
ಇದನ್ನು ನಮಗೆ ಇಂದು ನಾವು ಭಾವಿಸಿದರೆ ಇದು ಸಫಲತೆ ನೀಡುವುದಿಲ್ಲ. ನಾವು ನಿಮಿತ್ತ ಮಾತ್ರ. ಹೀಗಾಗಿ, ನಾವಿಲ್ಲಿ ಕೇವಲ ಮಾಧ್ಯಮವಾಗಿ, ರಾಘವೇಂದ್ರ ಸ್ವಾಮಿಗಳ ದಿವ್ಯ, ಭವ್ಯ ಪರಂಪರೆಯ ಪ್ರತಿನಿಧಿಗಳಾಗಿ, ಪೂರ್ವಗುರುಗಳ ಅನುಗ್ರಹದಿಂದ ಇಲ್ಲಿದ್ದೇವೆ ಅಷ್ಟೇ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post