ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕಾಗದ ನಗರ ಬೈಪಾಸ್ ರಸ್ತೆಯಲ್ಲಿನ ಸಂಜೀವಿನಿ ಹಿರಿಯರ ಆರೋಗ್ಯ ಕೇಂದ್ರದವರಿಗೆ ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಮಾಸ್ಕ್ ವಿತರಿಸಲಾಯಿತು.
ಇಂದು ಮಾಸ್ಕ್ ವಿತರಿಸಿ ಮಾತನಾಡಿದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ರಾವ್, ವಯೋವೃದ್ಧರು ಆರೋಗ್ಯದ ಕುರಿತು ಹೆಚ್ಚು ಗಮನ ಹರಿಸುವುದು ಸೂಕ್ತ. ಮಹಾ ಮಾರಿ ಕೊರೋನಾ ವಿಶ್ವವ್ಯಾಪ್ತಿ ಹರಡಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡಿ ಅನೇಕ ಅಮಾಯಕರ ಬಲಿ ಪಡೆದಿದೆ. ಕೊರೋನಾ ಯಾವ ವಯಸ್ಸಿಗೆ ಬಿಡದಿರುವ ಭೂತವಾಗಿರುವುದರಿಂದ ಎಲ್ಲರು ಜಾಗೃತರಾಗುವುದು ಸೂಕ್ತ ಆದ್ದರಿಂದ ಸಮಾಜದ ಮಹಿಳೆಯರೇ ಮನೆಗಳಲ್ಲಿ ತಯಾರಿಸಿದ ಮಾಸ್ಕ್ ನೀಡುವ ಮೂಲಕ ಜನರಿಗೆ ಅರಿವು ಮೂಡಿಸಲು ವಿತರಣೆ ಮಾಡಲಾಗುತ್ತಿದೆ ಎಂದರು.
ಆಶ್ರಮ ನಿವಾಸಿಗಳು ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಜೀವಿನಿ ಕೇಂದ್ರದ ಸಂಸ್ಥಾಪಕಿ ಸುನಿತಾ, ಸಮಾಜದ ಮುಖಂಡರಾದ ಶೋಭಾ ಗಂಗರಾಜ್, ಜಯಂತಿ ಶೇಖರ್ ಮುಂತಾದವರಿದ್ದರು.
Get in Touch With Us info@kalpa.news Whatsapp: 9481252093
















