ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ / ಕುವೈತ್ |
ದೇಶದ ಪ್ರತಿಷ್ಠಿತ ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ -ಎಂಇಐಎಲ್ #MEIL ಮತ್ತೊಂದು ಜಾಗತಿಕ ಮೈಲಿಗಲ್ಲು ಮುಟ್ಟಿದೆ.
ಕುವೈತ್ ಆಯಿಲ್ ಕಂಪನಿ (ಕೆಓಸಿ) ಯಿಂದ 225.5 ಮಿಲಿಯನ್ ಅಮೇರಿಕ ಡಾಲರ್ ಮೌಲ್ಯದ ಬೃಹತ್ ಯೋಜನೆ ಜಾರಿ ಆದೇಶ ತನ್ನದಾಗಿಸಿಕೊಂಡಿದೆ. ಈ ಯೋಜನೆ ಪಶ್ಚಿಮ ಕುವೈತ್’ನ ತೈಲ ಕ್ಷೇತ್ರಗಳಲ್ಲಿ ಹೊಸ ಗ್ಯಾಸ್ ಸ್ವೀಟನಿಂಗ್ ಮತ್ತು ಸಲ್ಫರ್ ರಿಕವರಿ ಸೌಲಭ್ಯ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ.
ಯೋಜನೆ “ಬಿಲ್ಡ್-ಒನ್-ಆಪರೇಟ್” ಆಧಾರದ ಮೇಲೆ ಅಭಿವೃದ್ಧಿಪಡಿಸಲ್ಪಡಲಿದೆ. ಕೆಓಸಿ ಸಂಸ್ಥೆಗೆ ಈ ಘಟಕವನ್ನು ಖರೀದಿಸುವ ಆಯ್ಕೆಯೂ ಇದ್ದು, ಇದು ಎರಡು ಹಂತಗಳಲ್ಲಿ – ಕಾರ್ಯನಿರ್ವಹಣೆ ಹಂತ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ ಹಂತಗಳಲ್ಲಿ – ನಡೆದಿದೆ.
ಬೂಸ್ಟರ್ ಸ್ಟೇಷನ್ ಬಿಎಸ್-171 ಹತ್ತಿರ ಇರುವ ಈ ಯೋಜನೆ 790 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಅದರ ನಂತರ ಐದು ವರ್ಷದ ಕಾರ್ಯಾಚರಣೆ ಮತ್ತು ನಿರ್ವಹಣೆ ಹಂತ ನಡೆಯಲಿದೆ. ಸಂಬಂಧಿತ ಸಲ್ಫರ್ ರಿಕವರಿ ಘಟಕನಲ್ಲಿ ಪ್ರತಿಯೊಂದು 100 ಟನ್ಸ್ ಪ್ರತಿ ದಿನ ಸಾಮರ್ಥ್ಯದ ಎರಡು ಟ್ರೈನ್’ಗಳು ಇರಲಿವೆ. ಒಟ್ಟು 99.9% ಸಲ್ಫರ್ ರಿಕವರಿ ದಕ್ಷತೆಯನ್ನು ಸಾಧಿಸಲಿವೆ. ಈ ಆಧುನಿಕ ಘಟಕವು 4% ಹೈಡ್ರೋಜನ್ ಸಲ್ಫೈಡ್ #HydrogenSulfide (H₂S) ಮತ್ತು 10% ಕಾರ್ಬನ್ ಡೈಆಕ್ಸೈಡ್ (CO₂) ಹೊಂದಿರುವ ದುರ್ವಾಸನೆಯ ಅನಿಲ ನಿರ್ವಹಿಸಲು ವಿನ್ಯಾಸಗೊಳಿಸಲ್ಪಟ್ಟಿದ್ದು, ಪ್ರತಿ ದಿನ 120 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಫೀಟ್ ಅನಿಲ ಶುದ್ಧೀಕರಣವಾಗಲಿದೆ.
ಗ್ಯಾಸ್ ಸ್ವೀಟ್ನಿಂಗ್ ಎಂದರೆ ನೈಸರ್ಗಿಕ ಅನಿಲದಿಂದ ಅಪಾಯಕಾರಿ ಆಮ್ಲೀಯ ಅನಿಲಗಳಾದ ಹೈಡ್ರೋಜನ್ ಸಲ್ಫೈಡ್ ಮತ್ತು ಕಾರ್ಬನ್ ಡೈಆಕ್ಸೈಡ್ ಅನಿಲಗಳನ್ನು ತೆಗೆದುಹಾಕಿ, ನೈಸರ್ಗಿಕ ಅನಿಲವನ್ನು ಸುರಕ್ಷಿತ, ಕಾರ್ಯಕ್ಷಮ ಮತ್ತು ಪರಿಸರ ಸ್ನೇಹಿಯಾಗಿಸುವ ಪ್ರಕ್ರಿಯೆ ಆಗಿದೆ.
ಶುದ್ಧೀಕರಿಸಿದ ಅನಿಲವನ್ನು ನಿರ್ಜಲೀಕರಣಗೊಳಿಸಿದ ನಂತರ ಕೆಓಸಿ ಸಂಸ್ಥೆಯ ಪೈಪ್ಲೈನ್ ಜಾಲದ ಮೂಲಕ ಮಿನಾ ಅಹ್ಮದಿ ರಿಫೈನರಿಯ ಏಲ್ಪಿಜಿ ಘಟಕಕ್ಕೆ ಸಾಗಿಸಲಾಗುತ್ತದೆ. ಈ ಯೋಜನೆ ಕುವೈತ್ನ ಸ್ಥಿರ ಶಕ್ತಿ, ಸ್ವಚ್ಛ ಇಂಧನ ಉತ್ಪಾದನೆ ಮತ್ತು ಪರಿಸರ ಸುರಕ್ಷತೆಗಳ ಮೇಲಿನ ಬದ್ಧತೆಗೆ ಸಹಕಾರಿಯಾಗಿದೆ.
“ಪಶ್ಚಿಮ ಕುವೈತ್’ನ ಈ ತಂತ್ರಜ್ಞಾನಾಧಾರಿತ ಅನಿಲ ಶುದ್ಧೀಕರಣ ಸೌಲಭ್ಯಕ್ಕಾಗಿ ಕುವೈತ್ ಆಯಿಲ್ ಕಂಪನಿಯೊಂದಿಗೆ #KuwaitOilCompany ಸಹಭಾಗಿಯಾಗಿರುವುದು. ಈ ಯೋಜನೆ ದೇಶೀಯ ಮೂಲಭೂತ ಸೌಕರ್ಯ ಸಂಸ್ಥೆಯಾಗಿರುವ ಎಂಇಐಎಲ್’ನ ಜಾಗತಿಕ ಬದ್ಧತೆ ಮತ್ತು ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ” ಎಂದು ಎಂಇಐಎಲ್ ನಿರ್ದೇಶಕ ಪಿ. ದೋರಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ತಂತ್ರಜ್ಞಾನಾಧಾರಿತ ಜಯದೊಂದಿಗೆ, ಎಂಇಐಎಲ್ ತನ್ನ ಮಧ್ಯಪ್ರಾಚ್ಯದ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿದೆ. ಎಂಇಐಎಲ್ ರಾಜಸ್ಥಾನ ರಿಫೈನರಿ ಮತ್ತು ಮೊಂಗೋಲ್ ರಿಫೈನರಿಗಳಿಗೂ ಇದೇ ರೀತಿಯ ಸಲ್ಫರ್ ರಿಕವರಿ ಘಟಕವನ್ನು ಸ್ಥಾಪಿಸುತ್ತಿದೆ. ಇವು ಹೈಡ್ರೋಕಾರ್ಬನ್ ಉದ್ಯಮದಲ್ಲಿ ಎಂಇಐಎಲ್’ನ ನಾಯಕತ್ವಕ್ಕೆ ಉದಾಹರಣೆ ಹಾಗೂ ಇಂಧನ ಸ್ವಾವಲಂಬನೆ ಮತ್ತು ನವೀನ ತಂತ್ರಜ್ಞಾನದ ಯಶಸ್ವಿ ಅಳವಡಿಕೆಗೆ ಸಾಕ್ಷಿಯಾಗಿದೆ.
ಎಂಇಐಎಲ್ ಸಮೂಹವು ಮೊಂಗೋಲಿಯಾ, ಟಾಂಜಾನಿಯಾ, ಇಟಲಿ ಮತ್ತು ಇನ್ನಿತರ ಹಲವು ದೇಶಗಳಲ್ಲಿ ಕುಡಿಯುವ ನೀರು, ಹೈಡ್ರೋಕಾರ್ಬನ್ ಮತ್ತು ವಿದ್ಯುತ್ ಯೋಜನೆಗಳಂತಹ ವಿವಿಧ ಅಂತರರಾಷ್ಟ್ರೀಯ ಮೂಲಸೌಕರ್ಯ ಕಾರ್ಯಗಳಲ್ಲಿ ವಿಶಾಲ ಅನುಭವವನ್ನು ಹೊಂದಿರುವ ದೇಶೀಯ ಸಂಸ್ಥೆಯಾಗಿ ಹೊರ ಹೊಮ್ಮಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















