ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಎಲ್ಲವೂ ನಮ್ಮ ಕೈಯಲಿಲ್ಲ. ನಮ್ಮ ಕೈಲಿರುವುದೆಲ್ಲಾ ಸಮಯಕ್ಕೆ ಸಿಗುವುದಿಲ್ಲ. ಇದ್ದಕ್ಕಿದ್ದಂತೆಯೇ ನನ್ನ ಹಿರಿಯ ಸಹೋದರ ಸಿಟಿ ಸ್ಕ್ಯಾನ್ ಮತ್ತು ಎಂಆರ್’ಐ ಸ್ಕ್ಯಾನ್ ಆಗಬೇಕಾಯಿತು. ನರರೋಗ ತಜ್ಞರು ಇದಕ್ಕೆ ಶಿಫಾರಸು ಮಾಡಿದ್ದರು.
ಶಿವಮೊಗ್ಗ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋದೆವು. ಅಲ್ಲಿ ಎಂಆರ್’ಐ ತಪಾಸಣೆ ಸೌಲಭ್ಯ ಇಲ್ಲ ಎಂದರು. ವ್ಹೀಲ್ ಚೇರ್ ತಳ್ಳುವ ಸಿಬ್ಬಂದಿ ಬಹಳ ಜಾಣತನದ ಮಾತಾಡಿದ. ವ್ಹೀಲ್ ಚೇರ್’ನಲ್ಲಿ ಕುಳಿತವರನ್ನು ಕಾರಿನ ಬಳಿಗೆ ತನ್ನಿ ಅಂದದ್ದೇ ತಪ್ಪಾಯಿತು. ಅದಕ್ಕೆ ತನ್ನ ಡ್ಯೂಟಿಯೇ ಅಲ್ಲ ಇಳಿಜಾರಿನಲ್ಲಿ ಪೇಷೆಂಟ್’ಗೆ ಏನಾದರೂ ಆದರೆ ಯಾರು ಹೊಣೆ? ಇಷ್ಟೆಲ್ಲ ಸಂಭಾಷಣೆ ಆಯಿತು. ವ್ಹೀಲ್ ಚೇರಿನ ಉದ್ದೇಶವನ್ನೇ ಆತ ಮರೆತಿದ್ದ ಅನಿಸಿತು.
ನಂತರ ಅಲ್ಲಿಂದ ಸೀದಾ ಮಲ್ನಾಡ್ ಡಯಾಗ್ನೊಸ್ಟಿಕ್ ಲ್ಯಾಬ್’ಗೆ ಹೋಗ ಬೇಕಾಯಿತು. ನಾವು ಪ್ರವೇಶಿಸುತ್ತಿದ್ದಂತೆಯೇ ಈರ್ವರು ನಮ್ಮನ್ನು ಪ್ರಶ್ನಿಸಿದರು.
ನಮಸ್ಕಾರ ಅಂತ ಹೇಳಿ ಬಂದ ಉದ್ದೇಶ ವಿಚಾರಿಸಿದರು. ಅವರ ಧಾಟಿ ನನಗೆ ಹಿಡಿಸಿತು. ಕೌಂಟರಿನಲ್ಲಿ ಶುಲ್ಕ ಪಾವತಿ ಮಾಡುತ್ತಿದ್ದಂತೆಯೇ ಸಮಸ್ಯೆ ಎದುರಾಯಿತು. ನನ್ನ ಸಹೋದರನಿಗೆ ಹೆಚ್ಚು ಕಾಯುವಷ್ಟು, ಕೂರುವಷ್ಟು ಚೈತನ್ಯವಿಲ್ಲ. ಈಗಾಗಲೇ ಎರಡು ಮೂರು ಮಂದಿ ತಪಾಸಣೆ ಇದೆ. ನೀವು ಅಪರಾಹ್ನ ನಾಲ್ಕು ಗಂಟೆಯವರೆಗೆ ಕಾಯ ಬೇಕು ಎಂದರು.
ಜೊತೆಯಲ್ಲಿದ್ದ ಇನ್ನೊಬ್ಬಣ್ಣ ಭೀಮಣ್ಣ ಕಾಯುವುದು ಕಷ್ಟ .ಈಗಾಗಲೇ ಆಕ್ಸಿಜನ್ ಮೇಲೆ ನಡಯುತ್ತಿದ್ದಾನೆ. ಇಲ್ಲೇ ಕೂತಿದ್ದರೆ ಆಕ್ಸಿಜನ್ ಲೆವೆಲ್ ಕಡಿಮೆಯಾದರೆ ದೇಹ ಸ್ವಾಸ್ಥ್ಯ ಕೆಟ್ಟೀತು ಎಂದ.
ಅದನ್ನೇ ಅವರಿಗೆ ತಿಳಿಸಿದೆವು. ಆ ಈರ್ವರೂ ನಮ್ಮ ಕೈಲಾದ ಪ್ರಯತ್ನ ಮಾಡ್ತೀವಿ. ಬೇಗ ನಿಮ್ಮ ಕೆಲಸ ಮಾಡ್ತೀವಿ. ಅಂತ ಭರವಸೆ ಕೊಟ್ಟರು. ಅಂತೂ ಸೀನಿಯಾರಿಟಿಯ ಪ್ರಕಾರವೇ ಆಗದಿದ್ದರೂ ವ್ಯಕ್ತಿಯ ಆರೋಗ್ಯ ದೃಷ್ಟಿಯಿಂದ ಅವರಿಗೆ ಮನವರಿಕೆಯಾಗಿ, ತಪಾಸಣೆಗೆ ಸಿದ್ಧ ಮಾಡಿದರು.
ಆ ಈರ್ವರು ಯಾರು ಅಂತ ನಿಮಗೆ ಕುತೂಹಲ ಅಲ್ಲವೆ? ಅವರೇ ಅಶೋಕ್ ಮತ್ತು ನವೀನ್.
ಮುಂಚೆ ಮಲ್ನಾಡ್ ಲ್ಯಾಬ್’ನಲ್ಲಿ ಈ ಮಾನವೀಯ ಸಂಪನ್ಮೂಲ ಸೇವೆ ಇರಲಿಲ್ಲ, ಈಗ ಇದೆ. ಅದೇ ವ್ಯತ್ಯಾಸ ಹಣ ಕೊಡುವುದು ಒಂದೇ ಅಲ್ಲ ಒಟ್ಟಿಗೇ ಪ್ರೀತಿ, ವಿಶ್ವಾಸ ತೋರಿಸಿ ಸ್ಪಂದಿಸುವುದೂ ಮುಖ್ಯ. ಈ ಪ್ರೀತಿ, ವಿಶ್ವಾಸಕ್ಕೆ ನಾವು ಎಷ್ಟು ಬೆಲೆ ಕಟ್ಟೋಣ ಹೇಳಿ?
(ಈ ಲೇಖನ ನಮ್ಮ ಅನುಭವಕ್ಕೆ ಬಂದ ಒಂದು ಸಣ್ಣ ವಿಚಾರವಷ್ಟೆ. ಯಾವುದೇ ಆಸ್ಪತ್ರೆಯ ವಿರುದ್ಧ ನಮ್ಮ ದೂರಲ್ಲ, ಬದಲಾಗಿ ಸಾರ್ವಜನಿಕ ಸೇವೆಯಲ್ಲಿರುವ ಎಲ್ಲ ಸಂಸ್ಥೆಗಳು ಅಳವಡಿಸಿಕೊಳ್ಳಬೇಕಾದ ವಾಸ್ತವಿಕ ಅಂಶ).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post