ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಶಿವಮೊಗ್ಗ ನಗರ ಉಪವಿಭಾಗ-2, ಘಟಕ -4ರ ವ್ಯಾಪ್ತಿಯಲ್ಲಿ ಜೂನ್ 14ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಸ್ಮಾರ್ಟ್ಸಿಟಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಕೋಟೆ ರಸ್ತೆ, ಓ.ಬಿ.ಎಲ್. ರಸ್ತೆ, ಪೆನ್ಶನ್ ಮೊಹಲ್ಲಾ, ಅಪ್ಪಾಜಿರಾವ್ ಕಾಂಪೌಂಡ್, ಸೈನ್ಸ್ ಫೀಲ್ಡ್, ಷಾಹಿ ಎಕ್ಸ್ಪೋರ್ಟ್ಸ, ಎಮ್.ಆರ್.ಎಸ್. ಎಫ್-1 ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಪ್ರದೇಶದ ವ್ಯಾಪ್ತಿಗೊಳಪಡುವ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post