ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಮ್ಮ ಪಕ್ಷದ ಎಲ್ಲ ಶಾಸಕರಂತೆ ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ ಹೌದು. ಆದರೆ, ಎಲ್ಲರಿಗೂ ಹೇಗೆ ಸಿಗಲು ಸಾಧ್ಯ. ಹೀಗಾಗಿ, ಮುಖ್ಯಮಂತ್ರಿಗಳಿಗೆ ಇರುವ ಒತ್ತಡವನ್ನು ಅರಿತುಕೊಂಡು ನೀಡಿರುವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಎಂಎಸ್’ಐಎಲ್ ನೂತನ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದ್ದಾರೆ.
ಎಂಎಸ್’ಐಎಲ್ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷ ಹಾಗೂ ಸರ್ಕಾರ ನೀಡಿರುವ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಒಂದೆರಡು ದಿನಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ, ಎಂಎಸ್’ಐಎಲ್ ಬಗ್ಗೆ ತಿಳಿದುಕೊಂಡು, ಏನಾಗಬೇಕು ಎಂಬ ಕುರಿತಾಗಿ ಮುಂದಿನ ಕಾರ್ಯ ಕಲಾಪಗಳನ್ನು ಸಿದ್ದಪಡಿಸಿಕೊಳ್ಳುತ್ತೇವೆ ಎಂದರು.
ನನ್ನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ ಪಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮತ್ತೆ ನನ್ನನ್ನು ಸದಾ ಆರ್ಶೀವದಿಸುತ್ತಿರುವ ಸಾಗರ ಹಾಗೂ ಸೊರಬ ಕ್ಷೇತ್ರ ಜನರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಇನ್ನು, ಹಾಲಪ್ಪ ನವರು ಬೆಂಗಳೂರಿನ ಎಂಎಸ್’ಐಎಲ್ ಕೇಂದ್ರ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಸಚಿವರಾದ ಜಗದೀಶ್ ಶೆಟ್ಟರ್, ವಿ. ಸೋಮಣ್ಣ, ಕೋಟ ಶ್ರೀನಿವಾಸ ಪೂಜಾರಿ,ಬಿ.ವೈ. ವಿಜಯೇಂದ್ರ, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಎಸ್.ಆರ್ ವಿಶ್ವನಾಥ್, ಎಂ.ಪಿ. ರೇಣುಕಾಚಾರ್ಯ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಮಾಡಳು ವಿರೂಪಾಕ್ಷಪ್ಪ, ಎಸ್.ಎನ್. ಸುಬ್ಬರೆಡ್ಡಿ, ಮಾಜಿ ಶಾಸಕರಾದ ಡಿ.ಎನ್. ಜೀವಜ್, ವಿ.ಎಸ್. ಪಾಟೀಲ್, ಮತ್ತಿತರರು ಅಭಿನಂದಿಸಿ ಶುಭ ಹಾರೈಸಿದರು.
Get In Touch With Us info@kalpa.news Whatsapp: 9481252093
Discussion about this post