ನವದೆಹಲಿ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ನಡುವೆಯೇ, ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆ ಕುರಿತು ನಿನ್ನೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಕುರಿತಾಗಿ ಪರಿಶೀಲನೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ.
ಪ್ರಧಾನಿ ನಿನ್ನೆ ಮಾಡಿದ್ದ ಭಾಷಣ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆಯೇ ಎಂಬ ಕುರಿತಾಗಿ ತನಿಖೆ ನಡೆಸಿ, ತೀರ್ಮಾನಕ್ಕೆ ಬರಲು ಉಪಸಮಿತಿಯೊಂದು ಆಯೋಗ ರಚನೆ ಮಾಡಿದೆ. ಈ ಸಮಿತಿ ಮೋದಿ ಭಾಷಣದ ವಿಚಾರದ ನೀತಿಸಂಹಿತೆಯ ನಿರ್ಬಂಧದ ಅಡಿಯಲ್ಲಿ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಿ, ವರದಿ ಸಲ್ಲಿಸಲಿದೆ.
ಭಾರತದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ ಶತ್ರುರಾಷ್ಟ್ರದ ಸ್ಯಾಟಲೈಟ್’ವೊಂದನ್ನು ಭಾರತದ ಡಿಆರ್’ಡಿಒ ವಿಜ್ಞಾನಿಗಳು ಕ್ಷಿಪಣಿ ಮೂಲಕ ಬಾಹ್ಯಾಕಾಶದಲ್ಲೇ ಧ್ವಂಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಚಾರವನ್ನು ನಿನ್ನೆ ಸ್ವತಃ ಪ್ರಧಾನಿ ಮೋದಿಯವರೇ ದೇಶವನ್ನುದ್ದೇಶಿಸಿ ಮಾತನಾಡಿ ಹೇಳಿದ್ದರು.
ಇದಕ್ಕೆ ಪ್ರತಿಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನಿ ಭಾಷಣ ನೀತಿಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ.
Discussion about this post