ನವದೆಹಲಿ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರುಗಳ ಟ್ವಿಟರ್ ಖಾತೆ ಹೆಸರು ಬದಲಾವಣೆಯಾಗಿದೆ.
ಮೈ ಬಿ ಚೌಕಿದಾರ್ ಪ್ರಚಾರಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಪ್ರಧಾನಿಯವರು ಚೌಕಿದಾರ್ ನರೇಂದ್ರ ಮೋದಿ ಎಂದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಚೌಕಿದಾರ್ ಅಮಿತ್ ಶಾ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.
Fellow Indians,
Happy that #MainBhiChowkidar has ignited the Chowkidar within all of us. Great fervour!
Ecstatic to see the passion and commitment to protect India from corrupt, criminal and anti-social elements.
Let us keep working together for a developed India.
— Chowkidar Narendra Modi (@narendramodi) March 17, 2019
ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್, ಜೆಪಿ ನಡ್ಡಾ, ಹರ್ಷ ವರ್ಧನ್, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಮತ್ತಿತರ ಮುಖಂಡರು ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರ್ಪಡೆ ಮಾಡಿಕೊಂಡಿದ್ದಾರೆ. ಶುದ್ಧತೆಯಿಂದ ನೈತಿಕ ಮೌಲ್ಯವನ್ನು ಕಾಪಾಡುವವನು ಚೌಕಿದಾರ್ ಆಗಿರುತ್ತಾರೆ. ಮತ್ತೆ ಚೌಕಿದಾರ್ ಎಲ್ಲರೂ ಹೃದಯ ತುಂಬಿ ಹೇಳಿ ಎಂದು ಅಮಿತ್ ಶಾ ಬರೆದುಕೊಂಡಿದ್ದಾರೆ.
जिसने बनाया स्वच्छता को संस्कार…वो है चौकीदार। #MainBhiChowkidar
कहो दिल से #ChowkidarPhirSe pic.twitter.com/jLqn6atvXR
— Chowkidar Amit Shah (@AmitShah) March 17, 2019
Discussion about this post