ನವದೆಹಲಿ: ಅದು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಹಾಗೂ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಅವಿನಾಭಾವ ಸಂಬಂಧ… ಇಂದು ಮೋದಿ ಇಷ್ಟು ದೊಡ್ಡ ಸ್ಥಾನಕ್ಕೇರಲು ಅದಕ್ಕೆ ಅಟಲ್ ಜೀ ಅವರೇ ಕಾರಣ ಎನ್ನುವುದು ಸರ್ವ ವಿಧಿತ..
ಇಂತಹ ಅಟಲ್ ಜೀ ಇಂದು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರ ಆರೋಗ್ಯಕ್ಕಾಗಿ ಇಡಿಯ ದೇಶ ಪ್ರಾರ್ಥನೆ ಮಾಡುತ್ತಿದೆ.
ಈ ವೇಳೆ ಅಟಲ್ ಜೀ ಹಾಗೂ ಮೋದಿ ಅವರ ಅಪರೂಪದ ಎರಡು ವೀಡಿಯೋಗಳು ವೈರಲ್ ಆಗಿವೆ.
ವಾಜಪೇಯಿ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಆ ಸಮಯದಲ್ಲಿ ನರೇಂದ್ರ ಮೋದಿಯವರು ಅಟಲ್ ಜೀ ಗಮನಕ್ಕೆ ಬರುತ್ತಾರೆ. ಅಟಲ್ ಜೀ, ಮೋದಿ ಅವರನ್ನು ಸಮೀಪಿಸಕ್ಕೆ ಬರುವಂತೆ ಸೂಚಿಸುತ್ತಾರೆ. ನರೇಂದ್ರ ಮೋದಿ ಅವರು ವಾಜಪೇಯಿಯವರ ಬಳಿಗೆ ಓಡಿ ಬರುತ್ತಾರೆ. ಆ ಸಮಯದಲ್ಲಿ ಅಟಲ್ ಜೀ ಏನು ಮಾಡಿದ್ರು ಗೊತ್ತಾ…! ನೀವೇ ನೋಡಿ.
ಇನ್ನೊಂದು ಅಪರೂಪದ ವೀಡಿಯೋ ಅಟಲ್ ಜೀ ಹಾಗೂ ಮೋದಿ ಹೋಳಿ ಹಬ್ಬದ ಸಂಭ್ರಮದಲ್ಲಿ ಬಣ್ಣ ಹಚ್ಚಿಕೊಂಡು ಕೈ ಕೈ ಹಿಡಿದುಕೊಂಡು ನೃತ್ಯ ಮಾಡಿದ್ದ ಸಂದರ್ಭ.
(Video Courtesy: Aapka Apna Paras, Political Masti)
Discussion about this post