ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಒಳಗೆ ಉಗ್ರರ ಆಟಕ್ಕೆ ಬ್ರೇಕ್ ಬಿದ್ದಂತೆಯೇ, ಗಡಿಯಲ್ಲಿ ಸಾವಿರಾರು ಉಗ್ರರನ್ನೂ ಹೊಡೆದು ಹಾಕಲಾಗಿದೆ. ಇದಕ್ಕೆಲ್ಲಾ ಕಾರಣ ಮೋದಿಯವರ ದಿಟ್ಟ ಕ್ರಮ..
ಈಗ ಅಂತಹುದ್ದೇ ಒಂದು ದಿಟ್ಟ ಕ್ರಮವನ್ನು ಮೋದಿ ಕೈಗೊಂಡ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಉಗ್ರರು ಆಹಾರಕ್ಕಾಗಿ ಅಕ್ಷರಶಃ ಭಿಕ್ಷುರಂತೆ ಬೇಡುತ್ತಿದ್ದಾರೆ ಎಂದು ವರದಿಯಾಗಿದೆ.
ಹೇಗಾದರೂ ಮಾಡಿ ದೇಶದ ವಿರುದ್ದ ಕೃತ್ಯ ಎಸಗುವ ಉಗ್ರರನ್ನು ಹೇಗಾದರೂ ಮಾಡಿ ದಮನ ಮಾಡಲೇಬೇಕು ಎಂದು ಶಪಥ ಮಾಡಿರುವ ಮೋದಿ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದಾರೆ. ಹೀಗಾಗಿ, ಯೋಧರು ಉತ್ಸಾಹದಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಲೇ ಇದ್ದು, ಗುಪ್ತವಾಗಿ ಅಡಗಿ ಕುಳಿತಿರುವ ಉಗ್ರರನ್ನು ಹುಡುಕಿ ಹುಡುಕಿ ಬೇಟೆಯಾಗಿ ಹೊಸಕಿ ಹಾಕುತ್ತಿದ್ದಾರೆ ನಮ್ಮ ಯೋಧರು.
ಇದರ ಭಾಗವಾಗಿ ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗಬೇಕು ಎಂದು ಗಡಿ ದಾಟಿ ಒಳ ಬಂದ ಶಸ್ತ್ರ ಸರ್ಜಿತ ಉಗ್ರರು ಅನ್ನ ಆಹಾರವಿಲ್ಲದೆ ಮನೆಯೊಂದಕ್ಕೆ ನುಗ್ಗಿ ಊಟ ಕೊಡಿ ಎಂದು ಅಂಗಲಾಚಿರುವ ಘಟನೆ ನಡೆದಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಮಾತನಾಡಿರುವ ಗಡಿ ಪ್ರದೇಶದ ಗ್ರಾಮವೊಂದರ ಯುವಕ, ಕಳೆದ ರಾತ್ರಿ 8 ಗಂಟೆ ಸುಮಾರಿನಲ್ಲಿ ಮನೆಯೊಂದಕ್ಕೆ ನುಗ್ಗಿದ ಮೂವರು ಉಗ್ರರು ಕಳೆದ ಐದು ದಿನಗಳಿಂದ ಆಹಾರ ಸೇವಿಸಿಲ್ಲ. ತಿನ್ನಲು ಮನೆಯಲ್ಲಿ ಏನಿದೆ ಎಂದು ಕೇಳಿದರು. ಭಯಭೀತರಾದ ನಾವು ಮನೆಯಲ್ಲಿದ್ದ ಬಿಸ್ಕತ್ತುಗಳು ಮತ್ತು ಸೇಬುಗಳನ್ನು ಅವರಿಗೆ ನೀಡಿದೆವು. ತುಂಬಾ ಹಸಿದವರಂತೆ ತಿಂದು ನೀರು ಕುಡಿದು ಭದ್ರತಾ ಪಡೆಗಳಿಗೆ ವಿಷಯ ತಿಳಿಸದಂತೆ ಬೆದರಿಕೆಯೊಡ್ಡಿ ಪರಾರಿಯಾದರು ಎಂದಿದ್ದಾನೆ.
Discussion about this post