ನವದೆಹಲಿ: ಈಗಾಗಲೇ ಬಿಡುಗಡೆಯಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಬಯೋಪಿಕ್ ಪಿಎಂ ನರೇಂದ್ರ ಮೋದಿ ಸಿನೆಮಾ, ಲೋಕಸಭಾ ಚುನಾವಣೆಯ ಫಲಿತಾಂಶದ ಮರುದಿನ ಬಿಡುಗಡೆಯಾಗಲಿದೆ.
ಈ ಕುರಿತಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಡುಗಡೆಯ ದಿನಾಂಕ ನಿಗದಿ ಮಾಡಲಾಗಿದೆ.
ನಟ ವಿವೇಕ್ ಒಬೆರಾಯ್ ನಟಿಸಿರುವ ಈ ಚಿತ್ರದಲ್ಲಿ ಮೋದಿಯವರನ್ನು ಬಹುವಾಗಿ ಪ್ರಶಂಸಿಸಿಲಾಗಿದ್ದು, ಪ್ರತಿಪಕ್ಷಗಳನ್ನು ಭ್ರಷ್ಟ ಎಂದು ಬಿಂಬಿಸಲಾಗಿದೆ.
ಹೀಗಾಗಿ, ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ಮುಕ್ತಾಯಗೊಂಡು, ಫಲಿತಾಂಶ ಪ್ರಕಟಗೊಳ್ಳುವವರೆಗೂ ಬಿಡುಗಡೆ ಮಾಡುವಂತಿಲ್ಲ ಎಂದು ಆದೇಶಿಸಿತ್ತು. ಹೀಗಾಗಿ, ಫಲಿತಾಂಶ ಪ್ರಕಟಗೊಂಡ ಮರುದಿನ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
Discussion about this post