ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಿನ್ನೆ ಸುರಿದ ಭಾರೀ ಮಳೆಗೆ ಹಾನಿಗೊಳಗಾಗಿರುವ 20ನೆಯ ವಾರ್ಡ್‌ಗೆ ಸೇರಿದ ಹೊಸಮನೆ ಬಡಾವಣೆಯ ಹಲವು ಮನೆಗಳು ಹಾಗೂ ರಾಜಾಕಾಲುವೆಯನ್ನು ದುರಸ್ಥಿಗೊಳಿಸುವಂತೆ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತಂತೆ ಇಂದು ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿರುವ ರೇಖಾ ರಂಗನಾಥ್ ನೇತೃತ್ವದ ನಿಯೋಗ, ಹೊಸಮನೆ ಬಡಾವಣೆಯ 6ನೆಯ ಮುಖ್ಯರಸ್ತೆಯ 7 ಅಡ್ಡರಸ್ತೆಗಳು ಹಾಗೂ ಶಾರದಮ್ಮ ಕಾಂಪೌಂಡ್, ನಿನ್ನೆ ಸಂಜೆ ಬಿದ್ದ ಭಾರೀ ಮಳೆಗೆ 250ಕ್ಕೂ ಹೆಚ್ಚು ಮನೆಗಳು ಜಲಾವೃತ್ತಗೊಂಡಿದ್ದು, ಸುಮಾರು ವರ್ಷಗಳ ಹಳೆಯದಾದ ರಾಜಾಕಾಲುವೆ ಸಂಪೂರ್ಣ ಹಾಳಾಗಿದೆ. ಕಾಲುವೆಯಲ್ಲಿ 3 ಅಡಿಯಷ್ಟು ಹೂಳು ತುಂಬಿದ್ದರಿಂದ ಅಲ್ಲಿಯ ಸುತ್ತಮುತ್ತಲ ಮನೆಗಳು ನೀರು ತುಂಬಿ ವಯೋವೃದ್ಧರು, ಮಕ್ಕಳು, ಬಾಣಂತಿಯರ, ನಿವಾಸಿಗಳ ಪಾಡು ಹೇಳತೀರದಾಗಿದ್ದು, ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಮನೆಯಲ್ಲಿದ್ದ ಎಲ್ಲ ಪೀಠೋಪಕರಣಗಳು ಹಾಳಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ ಎಂದಿದ್ದಾರೆ.
ಕೊರೋನಾ ವೈರಸ್ ಲಾಕ್’ಡೌನ್‌ನಿಂದಾಗಿ ಕಂಗೆಟ್ಟು ಹೋಗಿರುವ ಜನತೆ, ಇತ್ತ ಮಹಾನಗರಪಾಲಿಕೆ ರಾಜಾಕಾಲುವೆ ಹಾಗೂ ಕೆಲವು ದೊಡ್ಡ ಚರಂಡಿಗಳಲ್ಲಿ ಹೂಳೆತ್ತದ ಪರಿಣಾಮ ಈ ಅವಘಡಕ್ಕೆ ಕಾರಣವಾಗಿದೆ. ಕೂಡಲೇ ರಾಜಾಕಾಲುವೆಯ ಹೂಳೆತ್ತೆಸಿ, ಸಂಪೂರ್ಣ ಹಾಳಾಗಿರುವ ರಾಜಾಕಾಲುವೆಯನ್ನು ನಿರ್ಮಿಸಬೇಕು ಹಾಗೂ ದೊಡ್ಡ ಚರಂಡಿಗಳು ಕುಸಿದುಹೋಗಿದ್ದು, ತಾತ್ಕಾಲಿಕವಾಗಿ ಅವುಗಳ ದುರಸ್ತಿಕಾರ್ಯವನ್ನು ಕೈಗೊಂಡು ಸೂಕ್ತ ಪರಿಹಾರವನ್ನು ತ್ವರಿತಗತಿಯಲ್ಲಿ ನೀಡಬೇಕು ಎಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕರಾದ ಎಚ್.ಸಿ. ಯೋಗೇಶ್ ಮುಖಂಡರಾದ ಕೆ. ರಂಗನಾಥ್, ಚಂದ್ರು ಗೆಡ್ಡೆ, ಎಚ್.ಪಿ. ಗಿರೀಶ್ ಸ್ಥಳೀಯ ನಾಗರಿಕರಾದ ಬಿ. ನರಸಿಂಹಪ್ಪ, ಶಿವಶಂಕರ್, ಶ್ರೀನಿವಾಸ್, ಗೋವಿಂದರಾಜು, ಕುಮಾರ್ ಇದ್ದರು.
Get in Touch With Us info@kalpa.news Whatsapp: 9481252093
Discussion about this post