ಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ |
ಭಾರತಕ್ಕೆ ಬೇಕಾಗಿದ್ದ ನಟೋರಿಯಸ್, ಮೋಸ್ಟ್ ವಾಂಟೆಡ್ #LeTterrorist ಉಗ್ರ ಖೈಸರ್ ಪಾಕಿಸ್ಥಾನದಲ್ಲಿ #Pakistan ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿ ಬಲಿಯಾಗಿದ್ದಾರೆ.
ನಿಷೇಧಿತ ಲಷ್ಕರ್-ಇ-ತೊಯ್ಬಾ #LeT ಸಂಘಟನೆಯ ಸ್ಥಾಪಕ ಸದಸ್ಯ ಉಗ್ರ ಖೈಸರ್ ಫಾರೂಕ್ #QaiserFarooq ಮೇಲೆ ಕರಾಚಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಈತ ಮುಂಬೈ ದಾಳಿಯ #MumbaiAttack ಮಾಸ್ಟರ್ ಮೈಂಡ್ ಹಫೀಜ್ ಸಯೀದ್’ನ ಆಪ್ತ ಸಹಾಯಕನಾಗಿದ್ದ.
ಕರಾಚಿಯ #Karachi ರಸ್ತೆಯಲ್ಲಿ ಇತರ ವ್ಯಕ್ತಿಗಳ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಫಾರೂಕ್ ಮೇಲೆ ದಾಳಿ ನಡೆದಿದೆ.
ನಾಲ್ಕು ದಿನಗಳ ಹಿಂದೆ ಹಫೀಜ್ ಸಯೀದ್ ಪುತ್ರ ಕಮಾಲುದ್ದೀನ್ ಸಯೀದ್’ನನ್ನು ಅಪಹರಣ ಮಾಡಲಾಗಿತ್ತು. ಪೇಶಾವರದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಮಾಲುದ್ದೀನ್ ಸಯೀದ್’ನನ್ನು ಅಪಹರಣ ಮಾಡಿದ್ದರು.



















