ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರದ ಅಭಿವೃದ್ದಿ ಮಾಡಿರುವ ಸಂಸದ ಬಿ.ವೈ. ರಾಘವೇಂದ್ರ #BYRaghavendra ಈಗ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ.
ದೇಶದ ರೈಲ್ವೆ ಸಂಚಾರದಲ್ಲಿ ಕ್ರಾಂತಿ ಮಾಡಿರುವ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ #Shivamogga ಬರುವುದು ಬಹುತೇಕ ಖಚಿತವಾಗಿದ್ದು, ಈ ಕುರಿತಂತೆ ಸಂಸದರು ಮಾತನಾಡಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಡಿಪೋ ಜನವರಿಯಲ್ಲಿ ಉದ್ಘಾಟನೆಯಾಗಲಿದೆ. ಆ ಬಳಿಕ ವೇಳೆ ಶಿವಮೊಗ್ಗದಿಂದ ತಿರುಪತಿ, ಬೆಂಗಳೂರಿಗೆ , ಕೇರಳದ ಎರ್ನಾಕುಲಂಗೆ, ಬಿಹಾರ್ ಚಂಢೀಘಡ್’ಗೆ ಮುಂದಿನ ಫೆಬ್ರವರಿ ತಿಂಗಳಲ್ಲಿ ವಂದೇ ಭಾರತ್ #VandeBharat ಚಲಿಸಲಿದೆ ಎಂದು ತಿಳಿಸಿದ್ದಾರೆ.ಶಿವಮೊಗ್ಗಕ್ಕೆ ಒಂದೇ ಭಾರತ್ ಸಂಚಾರಕ್ಕೆ ರೈಲ್ವೆ ಇಲಾಖೆ ಅದಕ್ಕೆ ವೇಳಾ ಪಟ್ಟಿಯನ್ನು ಸಹ ಸಿದ್ದಮಾಡಿ ಜೊತೆಯಲ್ಲಿ ರೈಲಿನ ಸಂಖ್ಯೆಯನ್ನೂ ನೀಡಿ ಸಿದ್ದ ಮಾಡಿಟ್ಟುಕೊಂಡಿದೆ ಎಂದಿದ್ದಾರೆ.
ಕೊಂಕಣ ರೈಲ್ವೆ ಸಂಪರ್ಕ?
ಇನ್ನು, ತಾಳಗುಪ್ಪದಿಂದ ಹುಬ್ಬಳ್ಳಿಗೆ 150 KM ದೂರಕ್ಕೆ ರೈಲು ವ್ಯವಸ್ಥೆಗೆ ಸರ್ವೆ ನಡೆದಿದೆ ಎಂದು ಸಂಸದರು ತಿಳಿಸಿದ್ದಾರೆ.
ಈ ಮಾರ್ಗಕ್ಕೆ ಸಂಬಂಧಿಸಿದಂತೆ ಬದಲೀ ಜಮೀನು ಆಗಬೇಕಿದ್ದು, ತಾಳಗುಪ್ಪದಿಂದ ಹೊನ್ನಾವರ ಮಾರ್ಗದಲ್ಲಿ ಶೇ.73ರಷ್ಟು ಅರಣ್ಯ ಬರುತ್ತಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಅನುಮತಿ ಪಡೆಯಬೇಕಿದೆ ಎಂದರು.ಬೀರೂರು-ಶಿವಮೊಗ್ಗದ ನಡುವೆ ಡಬ್ಬಲ್ ಟ್ರಾö್ಯಕ್ ಕಾಮಗಾರಿ ನಡೆಯಬೇಕಿದೆ. ಭದ್ರಾವತಿ ಚಿಕ್ಕಜಾಜೂರು ನಡುವೆ ನೂತನ ಸಂಪರ್ಕ ಆಗಲಿದೆ ಎಂದರು.
ಈ ಕ್ರಾಂತಿಕಾರಕ ಅಭಿವೃದ್ಧಿ ಇಲ್ಲಿ ಮಾತ್ರವಲ್ಲ, ದೇಶದ ಎಲ್ಲಡೆ ಆಗುತ್ತಿದ್ದು, ಇಚ್ಚಾಶಕ್ತಿಯಿದ್ದಲ್ಲಿ ದೇಶ ಕಟ್ಟುವ ಬಗ್ಗೆ ಪ್ರಧಾನಿ ಮೋದಿಯಿಂದಲೇ ಸಾಧ್ಯ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post