ಕಲ್ಪ ಮೀಡಿಯಾ ಹೌಸ್ | ಮುಂಬೈ |
2000 ರೂ. ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ RBI ರದ್ದು ಮಾಡಿಲ್ಲ. ಇದರ ಬದಲಾವಣೆಗೆ ಆತುರ ಪಡೆಬೇಕಿಲ್ಲ ಎಂದು ಆರ್’ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಈ ಕುರಿತಂತೆ ಮಹತ್ವದ ಸ್ಪಷ್ಟನೆ ನೀಡಿರುವ ಅವರು, 2000 ರೂ. ಮುಖಬೆಲೆಗೆ ನೋಟಿನ ಚಲಾವಣೆಯನ್ನು ಆರ್’ಬಿಐ ರದ್ದು ಮಾಡಿಲ್ಲ. ಬದಲಾಗಿ ಹೊಸದಾಗಿ ವಿತರಣೆ ಮಾಡದಂತೆ ಬ್ಯಾಂಕ್’ಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಸಾರ್ವಜನಿಕರು 2000 ರೂ. ಮುಖಬೆಲೆ ನೋಟನ್ನು ಬ್ಯಾಂಕಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಆದರೆ, ಇದಕ್ಕಾಗಿ ಆತುರ ಪಡುವ ಅಗತ್ಯವಿಲ್ಲ. ನೋಟು ಬದಲಾವಣೆಗೆ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತು ಧಾವಂತ ಪಡುವ ಹಾಗೂ ಬ್ಯಾಂಕ್ ಸಿಬ್ಬಂದಿ ಮೇಲೆ ಒತ್ತಡ ಹಾಕುವ ಅಗತ್ಯವೂ ಸಹ ಇಲ್ಲ ಎಂದಿದ್ದಾರೆ.
2000 ರೂ. ನೋಟನ್ನು ಬದಲಾವಣೆ ಮಾಡಿಕೊಳ್ಳಲು ನಾಲ್ಕು ತಿಂಗಳ ಸಮಯವಿದೆ. ಸಾವಕಾಶವಾಗಿ ಬದಲಾವಣೆ ಮಾಡಿಕೊಳ್ಳಿ. ಅಲ್ಲಿಯವರೆಗೂ ಈ ನೋಟು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿಯೂ ಸಹ ಇರಲಿದೆ ಎಂದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















