ಕಲ್ಪ ಮೀಡಿಯಾ ಹೌಸ್ | ಮುಂಬೈ |
ದುಷ್ಕರ್ಮಿಯಿಂದ ಅತ್ಯಾಚಾರಕ್ಕೊಳಗಾಗಿ #Rape ಗರ್ಭಿಣಿಯಾಗಿದ್ದ 11 ವರ್ಷದ ಬಾಲಕಿಗೆ ಗರ್ಭಪಾತ #Abortion ಮಾಡಿಸಲು ಮುಂಬೈ ಹೈಕೋರ್ಟ್ ಅನುಮೋದನೆ ನೀಡಿರುವ ಘಟನೆ ನಡೆದಿದೆ.
ಈ ಕುರಿತಂತೆ ನ್ಯಾಯಮೂರ್ತಿಗಳಾದ ಶರ್ಮಿಳಾ ದೇಶ್ ಮುಖ್ ಮತ್ತು ಜಿತೇಂದ್ರ ಜೈನ್ ಅವರನ್ನೊಳಗೊಂಡ ನ್ಯಾಯಪೀಠವು ಬಾಲಕಿಯ ತಂದೆಯ ಮನವಿ ಪರಿಗಣಿಸಿ, ಈ ಆದೇಶ ನೀಡಿದ್ದಾರೆ.
ಬಾಲಕಿಯ ಹೊಟ್ಟೆ ಗಟ್ಟಿಯಾಗುವುದು ಹೊಟ್ಟೆಯ ಸೋಂಕಿನಿಂದಾಗಿದೆ ಎಂದು ಕುಟುಂಬವು ಆರಂಭದಲ್ಲಿ ಭಾವಿಸಿತ್ತು. ಈ ಹಿನ್ನೆಲೆಯಲ್ಲಿ ಥಾಣೆಯ ಆಸ್ಪತ್ರೆಯೊಂದು ಆರಂಭದಲ್ಲಿ ಔಷಧಿಗಳನ್ನು ಶಿಫಾರಸು ಮಾಡಿತು. ಆದರೆ ಯಾವುದೇ ಸುಧಾರಣೆ ಇಲ್ಲದ ನಂತರ, ಅ.24 ರಂದು ಮುಂಬೈ ಆಸ್ಪತ್ರೆಯ ವೈದ್ಯರು ಆಕೆ ಗರ್ಭಿಣಿಯಾಗಿದ್ದಾಳೆ ಎಂದು ದೃಢಪಡಿಸಿದರು.
Also read: ಶಿವಮೊಗ್ಗ | ಹಿಂದೂ ಸಂಪ್ರದಾಯದಂತೆ ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ
ಈ ಹಿನ್ನೆಲೆಯಲ್ಲಿ ತಂದೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್’ಐಆರ್ ದಾಖಲಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯ ತಂದೆ ಕೂಡ ವೈದ್ಯರಾಗಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 65 (2) (12 ವರ್ಷದೊಳಗಿನ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಶಿಕ್ಷೆ) ಮತ್ತು ಪೊಕ್ಸೊ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭ್ರೂಣದ ರಕ್ತ ಮತ್ತು ಅಂಗಾಂಶದ ಮಾದರಿಗಳನ್ನು ಡಿಎನ್’ಎ ವಿಶ್ಲೇಷಣೆಗಾಗಿ ಸಂರಕ್ಷಿಸಬೇಕೆAದು ನ್ಯಾಯಪೀಠ ನಿರ್ದೇಶಿಸಿದೆ. ಒಂದು ವೇಳೆ ಗರ್ಭಪಾತ ಸಾಧ್ಯವಾಗದೇ ಮಗುವು ಜನಿಸಿದರೆ ಮತ್ತು ಕುಟುಂಬವು ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಇಷ್ಟವಿಲ್ಲದಿದ್ದರೆ, ಅಗತ್ಯವಿರುವ ಎಲ್ಲಾ ವೈದ್ಯಕೀಯ ಬೆಂಬಲವನ್ನು ಖಾತ್ರಿಪಡಿಸಿಕೊಂಡು ರಾಜ್ಯವು ಸಂಪೂರ್ಣ ಜವಾಬ್ದಾರಿಯನ್ನು ವಹಿಸುತ್ತದೆ ಎಂದವರು ಮತ್ತಷ್ಟು ನಿರ್ದಿಷ್ಟಪಡಿಸಿದರು. ಅಂತಹ ಸಂದರ್ಭಗಳಲ್ಲಿ ಮಗುವಿನ ಜೀವವನ್ನು ಉಳಿಸಲು ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post