ಕಲ್ಪ ಮೀಡಿಯಾ ಹೌಸ್ | ಮುಂಬೈ |
ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ #RBI ಬ್ರಿಟನ್’ನಿಂದ #Britian 100 ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತರುವ ಮೂಲಕ ದಾಖಲೆ ನಿರ್ಮಿಸಿದೆ.
2023-24ರ ತನ್ನ ಹಣಕಾಸು ವರದಿಯಲ್ಲಿ ಆರ್’ಬಿಐ ಈ ವಿವರ ಪ್ರಕಟಿಸಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಮಾಣದಲ್ಲಿ ಚಿನ್ನ ತರಲಾಗುವುದು ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದೆ.

ಆರ್’ಬಿಐ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿದ್ದು, ವಿದೇಶದಲ್ಲಿ ದಾಸ್ತಾನು ಹೆಚ್ಚುತ್ತಿರುವ ಕಾರಣ, ಸ್ವಲ್ಪ ಚಿನ್ನವನ್ನು ಭಾರತಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.
Also read: ಪರಿಷತ್ ಚುನಾವಣೆ | ಶಿವಮೊಗ್ಗ | ಶಾಲಾ ಕಾಲೇಜುಗಳಲ್ಲಿ ಡಾ.ಧನಂಜಯ ಸರ್ಜಿ ಮತಬೇಟೆ
ಈಗ ತರಲಾಗಿರುವ 100 ಟನ್ ಚಿನ್ನವನ್ನು ದೇಶಕ್ಕೆ ಮರಳಿ ತರಲು ಹಲವು ತಿಂಗಳುಗಳ ಕಾಲ ಭಾರತೀಯ ರಿಸರ್ವ್ ಬ್ಯಾಂಕ್ ಯೋಜನೆ ರೂಪಿಸಿತ್ತು. ಪ್ರಮುಖವಾಗಿ ಚಿನ್ನವನ್ನು ಮರಳಿ ತರುವ ವಿಚಾರ ಎಲ್ಲಿಯೂ ಸೋರಿಕೆಯಾದಂತೆ ಎಚ್ಚರಿಕೆ ವಹಿಸಿತ್ತು.

ವಿದೇಶದಲ್ಲಿ ಭಾರತದ ಚಿನ್ನ ಎಷ್ಟಿದೆ?
ವಿವಿಧ ದೇಶಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 413.8 ಟನ್ ಚಿನ್ನವನ್ನು ಸುರಕ್ಷಿತವಾಗಿ ಇರಿಸಿದೆ.
ವಿದೇಶದಲ್ಲಿ ಇರಿಸಿರುವುದು ಏಕೆ?
ಸಾಮಾನ್ಯವಾಗಿ ಚಿನ್ನದ ಸಂಗ್ರಹ ಹೆಚ್ಚಿದ್ದಷ್ಟು ಆ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂದರ್ಥ. ಈ ಕಾರಣಕ್ಕೆ ಆರ್’ಬಿಐ ಚಿನ್ನದ ಸಂಗ್ರಹ ಮಾಡಲು ಮುಂದಾಗಿದೆ.

ಜುಲೈ 4 ಮತ್ತು 18 ರ ನಡುವೆ ಆರ್ಬಿಐ ಬ್ಯಾಂಕ್ ಆಫ್ ಇಂಗ್ಲೆAಡ್ ಮತ್ತು ಬ್ಯಾಂಕ್ ಆಫ್ ಜಪಾನ್ನಲ್ಲಿ 46.91 ಟನ್ ಚಿನ್ನವನ್ನು ಒತ್ತೆ ಇಟ್ಟು 400 ಮಿಲಿಯನ್ ಡಾರ್ಲ ಸಾಲ ಪಡೆದುಕೊಂಡಿತ್ತು.
1991ರ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಆರ್’ಬಿಐ ಚಿನ್ನವನ್ನು ಮರಳಿ ತಂದಿರುವುದು ಇದೇ ಮೊದಲು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post