ಕಲ್ಪ ಮೀಡಿಯಾ ಹೌಸ್ | ಮುಂಬೈ |
ಬಾಲಿವುಡ್ ಹೆಸರಾಂತ ನಟಿ ಕಂಗನಾ ರಣಾವತ್ Kangana Ranavath ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ನಿಶ್ಚಿತ ಎಂದು ಹೇಳಲಾಗಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಕಂಗನಾ ಅವರು ಭೇಟಿಯಾಗಿ ಚರ್ಚೆ ನಡೆಸಿರುವುದು ಈ ಸುದ್ದಿಗೆ ಪೂರಕವಾಗಿದ್ದು, ಈ ಕುರಿತಂತೆ ಹಲವು ತಿಂಗಳುಗಳಿಂದ ಇದ್ದ ಊಹಾಪೋಹಗಳಿಗೆ ತೆರೆ ಬೀಳುವ ಸೂಚನೆ ಸಿಕ್ಕಿದೆ.
ನಟಿ ಕಂಗನಾ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಮಾತುಗಳು ಹಲವು ವರ್ಷಗಳಿಂದಲೇ ಕೇಳಿ ಬರುತ್ತಿದೆ. ಈ ಕುರಿತಂತೆ ಮಾತನಾಡಿದ್ದ ಅವರ ತಂದೆ ಅಮರದೀಪ್ ರನೌತ್, ಮಗಳು 2024 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ಸ್ಪಷ್ಟವಾಗಿ ಹೇಳಿರಲಿಲ್ಲ.
ಈ ನಡುವೇ, ಕಂಗನಾ ಅವರು ತಮ್ಮ ತೇಜಸ್ ಸಿನಿಮಾ ರಿಲೀಸ್ ಬೆನ್ನಲ್ಲೇ ಕಂಗನಾ ದ್ವಾರಕಾಗೆ ಬಂದಿಳಿದಿದ್ದರು. ದೇವರ ದರ್ಶನ ಪಡೆದು, ರಾಜಕಾರಣದ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದರು.
ಕೃಷ್ಣನ ಆಶೀರ್ವಾದ ನನ್ನ ಮೇಲೆ ಇದ್ದರೆ, ನಾನೂ ಕೂಡ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post