ಕಲ್ಪ ಮೀಡಿಯಾ ಹೌಸ್ | ಮುಂಬೈ |
ಐಪಿಎಲ್ 2024ರ ಸೀಸನ್’ಗಾಗಿ ನಗರಕ್ಕೆ ಆಗಮಿಸಿರುವ ಹಾರ್ದಿಕ್ ಪಾಂಡ್ಯ Hardik Pandya ಡ್ರೆಸ್ಸಿಂಗ್ ರೂಂನಲ್ಲಿ ಹಿಂದೂ ಸಂಪ್ರದಾಯದಂತೆ ದೇವರ ಪೂಜೆ ಸಲ್ಲಿಸಿದ್ದಾರೆ.
चला सुरु करूया 🙏🥥#OneFamily #MumbaiIndians @hardikpandya7 pic.twitter.com/XBs5eJFdfS
— Mumbai Indians (@mipaltan) March 11, 2024
ಈ ಕುರಿತಂತೆ ಮುಂಬೈ ಇಂಡಿಯನ್ಸ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಡ್ರೆಸ್ಸಿಂಗ್ ರೂಂನಲ್ಲಿ ದೇವರ ಫೋಟೋ ಇಟ್ಟು, ಹಾರ ಹಾಕಿ ಹಾರ್ದಿಕ್ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾರ್ಕ್ ಬೌರ್ಚ ಹಿಂದೂ ಸಂಪ್ರದಾಯದಂತೆ ತೆಂಗಿನಕಾಯಿ ಒಡೆದಿದ್ದಾರೆ. ಆನಂತರ ಇಬ್ಬರೂ ಒಟ್ಟಾಗಿ ಪೂಜೆ ಸಲ್ಲಿಸಿದ್ದಾರೆ.
Also read: ಎಲೆಕ್ಷನ್ ಮುನ್ನ ಗುಡ್ ನ್ಯೂಸ್ | ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ | ಎಂದಿನಿಂದ ಅನ್ವಯ?
ಐಪಿಎಲ್ 2024 ರ ಸೀಸನ್ ಪ್ರಾರಂಭವಾಗುವ ಮೊದಲು ಫ್ರಾಂಚೈಸಿಯ ನಾಯಕನಾಗಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್’ಗೆ ಮರಳಿರುವ ವೀಡಿಯೊ ವೈರಲ್ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post