ಕಲ್ಪ ಮೀಡಿಯಾ ಹೌಸ್ | ಮುಂಬೈ |
ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ದೇವರು ನನ್ನ ಬ್ರಾ ಸೈಜ್ ತೆಗದುಕೊಳ್ಳುತ್ತಿದ್ದಾನೆ ಎಂದು ಹೇಳಿಕೆ ನೀಡಿದ ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ತನಿಖೆಗೆ ಸೂಚನೆ ನೀಡಲಾಗಿದೆ.
ಮಹಾಭಾರತ ಧಾರಾವಾಹಿಯಲ್ಲಿ ಭಗವಾನ್ ಕೃಷ್ಣ ಖ್ಯಾತಿಯ ಸೌರಭ್ ರಾಜ್ ಜೈನ್ ಜೊತೆ ಫ್ಯಾಷನ್ ಸಂಬಂಧಿತ ವೆಬ್ ಸರಣಿಯಲ್ಲಿ ಶ್ವೇತಾ ತಿವಾರಿ ನಟಿಸಿದ್ದಾರೆ. ಈ ವೆಬ್ ಸೀರಿಸ್ ಪ್ರಮೋಷನ್ ಇತ್ತೀಚೆಗೆ ಭೋಪಾಲ್’ನಲ್ಲಿ ನಡೆದ ವೇಳೆ ಮಾತನಾಡಿದ್ದ ತಿವಾರಿ, ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾನೆ ಎಂದಿದ್ದರು. ಈ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ, ಪರ ವಿರೋಧ ಹೇಳಿಕೆ ವ್ಯಕ್ತವಾಗಿತ್ತು.
ಈ ಹೇಳಿಕೆ ಗಂಭೀರತೆಯನ್ನು ಪಡೆದುಕೊಂಡ ನಂತರ ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಅಲ್ಲಿನ ಗೃಹ ಸಚಿವರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post