ಕಲ್ಪ ಮೀಡಿಯಾ ಹೌಸ್ | ಮುಂಬೈ |
ಭಾರತೀಯ ಶೂಟಿಂಗ್’ಗೆ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, ಒಲಿಂಪಿಯನ್ ಮತ್ತು ಭಾರತೀಯ ಶೂಟಿಂಗ್ ಮಾಜಿ ಮುಖ್ಯ ತರಬೇತುದಾರ ಸುಮಾ ಶಿರೂರ್ ಅವರಿಗೆ ಮುಂಬೈನ ಕ್ರೀಡಾಪತ್ರಕರ್ತರ ಸಂಘವು 2025 ರ ಎಸ್’ಜೆಎಎಂ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ವರ್ಲ್ಡ್ ಸ್ಪೋರ್ಟ್ಸ್ ಜರ್ನಲಿಸ್ಟ್ ಡೇ ಅಂಗವಾಗಿ ಆಯೋಜಿಸಲಾದ ಈ ಸಮಾರಂಭದಲ್ಲಿ, ಭಾರತದ ಶೂಟಿಂಗ್ ದಿಗ್ಗಜರಾದ ದೀಪಾಲಿ ದೇಶಪಾಂಡೆ ಮತ್ತು ಅಂಜಲಿ ಭಗವತ್ ಅವರಿಗೂ ಲೈಫ್ ಟೈಮ್‌ಅಚೀವ್ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಒಲಿಂಪಿಕ್ಸ್ ತಲುಪಿದ ಎರಡನೇ ಭಾರತೀಯ ಮಹಿಳಾ ಶೂಟರ್ ಎಂಬ ಖ್ಯಾತಿಯಿಂದ ಆರಂಭವಾಗಿ, ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್’ಗಳಲ್ಲಿ ಭಾರತೀಯ ಶೂಟಿಂಗ್ ತಂಡವನ್ನು ಯಶಸ್ಸಿನ ದಾರಿಗೆ ನಡೆಸಿದವರೆಗೆ ಸುಮಾ ಶಿರೂರ್’ನ ಸಾಧನೆ ಅಪಾರವಾಗಿದೆ.

ಈ ಬಗ್ಗೆ ಮಾತನಾಡಿದ ಸುಮಾ ಶಿರೂರ್ ಈ ಪ್ರತಿಷ್ಠಿತ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದಕ್ಕಾಗಿ ಮುಂಬೈನ ಕ್ರೀಡಾ ಪತ್ರಕರ್ತರ ಸಂಘಕ್ಕೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಭಾರತದಲ್ಲಿ ಶೂಟಿಂಗ್ ಕ್ರೀಡೆಗಳ ಅಭಿವೃದ್ಧಿ ಮತ್ತು ಪ್ರಗತಿಗೆ ಕೊಡುಗೆ ನೀಡುವ ನನ್ನ ನಿರಂತರ ಪ್ರಯತ್ನಗಳಿಗೆ ಈ ಪ್ರಶಸ್ತಿ ಅರ್ಥಪೂರ್ಣ ಪ್ರೋತ್ಸಾಹವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.

ಭಾರತೀಯ ಶೂಟಿಂಗ್ ಮತ್ತು ಕ್ರೀಡಾಪಟು ಅಭಿವೃದ್ಧಿಗೆ ಅವರ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ, 2024 ರ ಭಾರತೀಯ ಕ್ರೀಡಾ ಗೌರವಗಳಲ್ಲಿ ವರ್ಷದ ಅತ್ಯುತ್ತಮ ತರಬೇತುದಾರ (ಮಹಿಳಾ) ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post