ಕಲ್ಪ ಮೀಡಿಯಾ ಹೌಸ್ | ಮೈಸೂರು |
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ Minister Eshwarappa ರಾಜಕೀಯ ಪಿತೂರಿಗೆ ಬಲಿಯಾಗಿದ್ದಾರೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ Minister Gopalaiah ಪ್ರತಿಕ್ರಿಯಿಸಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಇದೊಂದು ರಾಜಕೀಯ ಪಿತೂರಿ.
ಗುತ್ತಿಗೆದಾರನೊಬ್ಬ ಡೆಲ್ಲಿಗೆ ಯಾಕೆ ಹೋಗಿದ್ದ? ಯಾರು ಟಿಕೆಟ್ ಬುಕ್ ಮಾಡಿದ್ದಾರೆ? ಯಾರ ಅಕೌಂಟ್‌ನಿಂದ ಟಿಕೆಟ್ ಬುಕ್ ಆಗಿದೆ?
ಎಲ್ಲವೂ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು.
Also read: ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಸಂತೋಷ್ ಆರೋಪದ ಅಮೂಲಾಗ್ರ ತನಿಖೆಗೆ ಸಚಿವ ಈಶ್ವರಪ್ಪ ಒತ್ತಾಯ
ಸಿಎಂ ಉಡುಪಿಗೆ ಹೋದಾಗ ಅವರು ಯಾಕೆ ಹೋಗಿದ್ದರು? ಆತ್ಮಹತ್ಯೆ ಮಾಡಿಕೊಂಡ ಬಳಿಕ ಆತನ ಸ್ನೇಹಿತರು ಎಲ್ಲಿಗೆ ಹೋದರು?ಇದುವರೆಗೂ ಯಾಕೆ ತಲೆಮರೆಸಿಕೊಂಡಿದ್ದಾರೆ ಎಂಬ ವಿಷಯಗಳ ಕುರಿತು ತನಿಖೆ ಆಗಬೇಕಿದೆ. ನಾವು ಈಶ್ವರಪ್ಪ ಜತೆಗಿದ್ದೇವೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post