ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ರೈಲು ವಿಭಾಗದಿಂದ #Mysore Railway Division ಅಮೃತ ಸಂವಾದ #Amrutha Samvada ಉಪಕ್ರಮದ ಅಂಗವಾಗಿ, ಸಕಲೇಶಪುರ, ಹಾವೇರಿ ಮತ್ತು ಶಿವಮೊಗ್ಗ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಹಾಗೂ ಸ್ಥಳೀಯ ನಾಗರಿಕರೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.
ಉದ್ದೇಶ ಪ್ರಯಾಣಿಕರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದು, ಅವರ ಪ್ರತಿಕ್ರಿಯೆಗಳನ್ನು ಸಂಗ್ರಹಿಸುವುದು ಹಾಗೂ ಭಾರತೀಯ ರೈಲ್ವೆಯು ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಹಂಚಿಕೊಳ್ಳುವುದು ಈ ಸಂವಾದದ ಉದ್ದೇಶವಾಗಿತ್ತು.
ಸಕಲೇಶಪುರ ರೈಲು ನಿಲ್ದಾಣ
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಪ್ರಯಾಣಿಕರು ಹಾಗೂ ಸ್ಥಳೀಯ ನಾಗರಿಕರೊಂದಿಗೆ ನೇರವಾಗಿ ಸಂವಾದ ನಡೆಸಿದರು.
ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಲೋಹಿತೇಶ್ವರ ಜೆ. ಹಾಗೂ ಡಾ. ಅಕ್ಷತಾ ಉಪಸ್ಥಿತರಿದ್ದರು. ಡಿಆರ್’ಎಂ ಅವರು ಪ್ರಯಾಣಿಕರ ಸೌಲಭ್ಯಗಳನ್ನು ವೃದ್ಧಿಸಲು ಹಾಗೂ ಉತ್ತಮ ಪ್ರಯಾಣ ಅನುಭವ ಒದಗಿಸಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವಿವರಿಸಿದರು. ಪ್ರಯಾಣಿಕರು ಸಕಲೇಶಪುರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ತಮ್ಮ ಅಮೂಲ್ಯ ಸಲಹೆಗಳನ್ನು ಹಂಚಿಕೊಂಡರು.
ಹಾವೇರಿ ರೈಲು ನಿಲ್ದಾಣ:
ನಿಲ್ದಾಣ ನಿರ್ವಾಹಕರು ಅಮೃತ ಸಂವಾದವನ್ನು ಆಯೋಜಿಸಿದರು. ಸ್ಥಳೀಯ ಜನರು ಹಾಗೂ ಪ್ರಯಾಣಿಕರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ಹಂಚಿಕೊಂಡರು. ಸಾರ್ವಜನಿಕರಿಗೆ ಪೂರ್ಣಗೊಂಡ ಮತ್ತು ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಅಮೃತ ಕಾಲದ ಪಂಚ ಪ್ರಾಣ ದೃಷ್ಟಿಕೋನದ ಬಗ್ಗೆ ಮಾಹಿತಿ ನೀಡಲಾಯಿತು.
ಭಾಗವಹಿಸಿದವರು ಈಗಾಗಲೇ ಕೈಗೊಂಡಿರುವ ಸೌಲಭ್ಯಗಳನ್ನು ಮೆಚ್ಚಿ ಕೆಳಗಿನ ವಿಷಯಗಳನ್ನು ಹಂಚಿಕೊAಡರು.
ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಹಿರಿಯ ನಾಗರಿಕರು ಹಾಗೂ ಅಸ್ವಸ್ಥರಿಗೆ ಅನುಕೂಲವಾಗುವಂತೆ ನಿಲ್ದಾಣದ ಮುಖ್ಯ ಪ್ರವೇಶ ದ್ವಾರವನ್ನು ತೆರೆಯಲು ಕ್ರಮ ಕೈಗೊಳ್ಳಬೇಕು.
ರೈಲುಗಳಲ್ಲಿ ಸ್ವಚ್ಛತೆ ಕಾಪಾಡುವುದನ್ನು ಅತ್ಯಂತ ಪ್ರಾಮುಖ್ಯತೆಯಿಂದ ನೋಡಬೇಕು. ಸಾರ್ವಜನಿಕರು ನಿಲ್ದಾಣದ ಸ್ವಚ್ಛತೆ ಹಾಗೂ ಸೌಲಭ್ಯಗಳನ್ನು ಕಾಪಾಡಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಿವಮೊಗ್ಗ ರೈಲು ನಿಲ್ದಾಣ:
ಪ್ರಯಾಣಿಕರು ಸಕ್ರಿಯವಾಗಿ ಅಮೃತ ಸಂವಾದದಲ್ಲಿ ಭಾಗವಹಿಸಿದರು. ಸಾರ್ವಜನಿಕರಿಗೆ ಪೂರ್ಣಗೊಂಡ ಮತ್ತು ಪ್ರಗತಿಯಲ್ಲಿರುವ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಲಾಯಿತು.
ಭಾಗವಹಿಸಿದವರು ರೈಲ್ವೆಯು ಕೈಗೊಂಡಿರುವ ಪ್ರಯತ್ನಗಳನ್ನು ಮೆಚ್ಚಿ, ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಹಾಗೂ ರೈಲುಗಳು ಮತ್ತು ನಿಲ್ದಾಣಗಳ ಸ್ವಚ್ಛತೆಯನ್ನು ಕಾಪಾಡಲು ಒತ್ತಾಯಿಸಿದರು.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ಮಾತನಾಡಿ, ಅಮೃತ ಸಂವಾದವು ರೈಲ್ವೆ ಹಾಗೂ ಪ್ರಯಾಣಿಕರ ಮಧ್ಯೆ ನೇರ ಸಂವಹನಕ್ಕಾಗಿ ಅತ್ಯಂತ ಮಹತ್ವದ ವೇದಿಕೆ. ಇದು ಸಾರ್ವಜನಿಕರ ನಿರೀಕ್ಷೆಗಳನ್ನು ಅರಿತು, ಅವರ ಅಭಿಪ್ರಾಯಗಳನ್ನು ಭವಿಷ್ಯದ ಅಭಿವೃದ್ಧಿ ಯೋಜನೆಗಳಲ್ಲಿ ಅಳವಡಿಸಲು ಸಹಕಾರ ನೀಡುತ್ತದೆ ಎಂದರು.
ಸಾರ್ವಜನಿಕರ ಸಹಕಾರ, ಸ್ವಚ್ಛತೆ ಮತ್ತು ಸೌಲಭ್ಯಗಳ ಜವಾಬ್ದಾರಿಯುತ ಬಳಕೆಯ ಅಗತ್ಯತೆಯನ್ನು ಒತ್ತಿ ಹೇಳಿದರು. ಈ ಮೂಲಕ ರೈಲು ಸೇವೆಗಳ ಗುಣಮಟ್ಟವನ್ನು ಕಾಪಾಡಿ, ಅಭಿವೃದ್ಧಿಯ ಪ್ರಯೋಜನಗಳು ಪ್ರತಿಯೊಬ್ಬ ಪ್ರಯಾಣಿಕರಿಗೂ ತಲುಪುವಂತೆ ಮಾಡಲು ಸಾಧ್ಯ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post