ಕಲ್ಪ ಮೀಡಿಯಾ ಹೌಸ್ | ಮೈಸೂರು |
ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿ Bangalore-Mysore 10 lane road ಮುಂಬರುವ ಮಾರ್ಚ್ ತಿಂಗಳಿನ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಈ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮಾರ್ಚ್ 2 ಅಥವಾ 3ನೆಯ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದಿದ್ದಾರೆ.
ಪ್ರಧಾನಿಯವರು ಈ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಲಿದ್ದು, ಕುಶಾಲನಗರ ಹಾಗೂ ಮೈಸೂರು ನಡುವಿನ ಹೆದ್ದಾರಿಗೂ ಸಹ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಹೆದ್ದಾರಿ ಟೋಲ್ ಎಷ್ಟು?
ಹೆದ್ದಾರಿ ಲೋಕಾರ್ಪಣೆಗೊಳ್ಳುವ ಅಂತಿಮ ಹಂತದಲ್ಲಿ ಮೈಸೂರು ಹಾಗೂ ಬೆಂಗಳೂರು ನಡುವಿನ ಎರಡೂ ಕಡೆ ಸಂಚಾರಕ್ಕೆ 250 ರೂ. ಟೋಲ್ ನಿಗದಿಯಾಗಬಹುದು. ಫ್ಲೈ ಓವರ್’ಗಳು ಬಂದಾಗ ಸಾಮಾನ್ಯವಾಗಿ ಟೋಲ್ ದರ ಕೊಂಚ ಹೆಚ್ಚಾಗುತ್ತದೆ. ಈ ರಸ್ತೆಯಲ್ಲೂ ಫ್ಲೈ ಓವರ್ ಇರುವ ಕಾರಣ 250 ರೂ. ಟೋಲ್ ನಿಗದಿಯಾಗಬಹುದು ಎಂದಿದ್ದಾರೆ.
Also read: ಪ್ರಧಾನಿ ಮೋದಿ ಜೊತೆ ಡಿನ್ನರ್’ನಲ್ಲಿ ಭಾಗಿಯಾದ ರಿಷಬ್, ಯಶ್, ಅಶ್ವಿನಿ ಪುನೀತ್ ರಾಜಕುಮಾರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post