ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾರೀ ವಿರೋಧದ ನಡುವೆಯೂ ನಾಡಹಬ್ಬ ದಸರಾಗೆ #Nadahabba Dasara ಸಾಹಿತಿ ಬಾನು ಮುಷ್ತಾಕ್ #Banu Mushthaq ಇಂದು ಮೈಸೂರಿನಲ್ಲಿ ಚಾಲನೆ ನೀಡಿದರು.
ಚಾಮುಂಡಿ ಬೆಟ್ಟದಲ್ಲಿ ದೇವಿಗೆ ಪೂಜೆ ಸಲ್ಲಿಸಿ, ಮಂಗಳಾತಿ ತೆಗೆದುಕೊಂಡು, ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ಅಧಿಕೃತವಾಗಿ ಚಾಲನೆ ನೀಡಿದರು.

ಇಂದಿನಿಂದ ದಸರಾ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ಸಾಂಸ್ಕೃತಿಕ ನಗರಿ ಸಿಂಗಾರಗೊಂಡಿದ್ದು, ವಾರ್ಷಿಕ ದಸರಾ ಆಚರಣೆಯ ಉದ್ಘಾಟನೆಗೊಂಡಿದೆ.

ನಾಡ ಹಬ್ಬ ಎಂದು ಆಚರಿಸಲಾಗುವ ಈ ಉತ್ಸವವು ಈ ವರ್ಷ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ಅದ್ಧೂರಿ ಸಮಾರಂಭವಾಗಲಿದೆ ಮತ್ತು ರಾಜಮನೆತನದ ವೈಭವ ಮತ್ತು ವೈಭವವನ್ನು ನೆನಪಿಸುತ್ತದೆ.
ಇದಕ್ಕೂ ಮುನ್ನ ಹಸಿರು ಬಾರ್ಡರ್ ಇರುವ ಹಳದಿ ಮೈಸೂರು ರೇಷ್ಮೆ ಸೀರೆ, ತಲೆಗೆ ಮೈಸೂರು ಮಲ್ಲಿಗೆ ಮುಡಿದು ಸಿಎಂ ಸಿದ್ದರಾಮಯ್ಯ, ಸಚಿವರ ಜೊತೆ ಬಾನು ಮುಷ್ತಾಕ್ ದೇವಸ್ಥಾನಕ್ಕೆ ಆಗಮಿಸಿದರು. ಗರ್ಭಗುಡಿ ಮುಂಭಾಗದ ಆವರಣದಲ್ಲಿ ನಿಂತು ತಾಯಿ ಚಾಮುಂಡಿ ದರ್ಶನ ಪಡೆದರು. ನಂತರ ಗಣಪತಿಗೆ ಕೈ ಮುಗಿದು, ಮಂಗಳಾರತಿ ಪಡೆದು ಪ್ರಸಾದ ಸ್ವೀಕರಿಸಿದರು.

ನಾಡದೇವಿಗೆ ಬಾನು ಮುಷ್ತಾಕ್ ಅವರು ಪೂಜೆ ಸಲ್ಲಿಸಿ ಭಕ್ತಿಯಿಂದ ಭಾಗಿಯಾಗಿ ಮಹಾಮಂಗಳಾರತಿ ಸ್ವೀಕರಿಸಿದರು. ದೇವಿಯ ದರ್ಶನ ಪಡೆದು ಭಾವುಕರಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















Discussion about this post