ಕಲ್ಪ ಮೀಡಿಯಾ ಹೌಸ್
ಮೈಸೂರು: ನಗರದ ಪ್ರತಿಭೆ ವೇದಿಕೆ ವತಿಯಿಂದ ಮನೆ ಮನದಲ್ಲಿ ಶ್ರೀ ಶಂಕರಾಚಾರ್ಯರು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಪ್ರಾಂಶುಪಾಲ ಪ್ರೊ ಹೆಚ್. ಎಸ್. ನರಸಿಂಹಮೂರ್ತಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಪ್ರವಚನಕಾರರಾದ ಪುನೀತ್ ಜಿ. ಕೂಡ್ಲೂರು ಶಂಕರಾಚಾರ್ಯರ ಕುರಿತು ಉಪನ್ಯಾಸ ನೀಡಿದರು.
ಮೈಸೂರಿನ ವನ್ಯ ಜೀವಿ ಛಾಯಾಗ್ರಾಹಕ ಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆ ಉಪಾಧ್ಯಕ್ಷ ಎಸ್. ನಾಗೇಂದ್ರರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವೇದಿಕೆ ವತಿಯಿಂದ ಪುನೀತ್ ಕೂಡ್ಲೂರು ಅವರನ್ನು ಸನ್ಮಾನಿಸಲಾಯಿತು.
ರಮೇಶ್, ಸರಸ್ವತಿ, ಗಣೇಶ ಕೂಡ್ಲೂರು, ಕ್ಷಮಾ, ಹೇಮಾ, ಮಂಜುನಾಥ, ಗೀತಾ, ಶ್ರೀನಿವಾಸ, ವೀಣಾ, ಮುರುಡಿ, ಚಂದ್ರಶೇಖರ, ಪೂಜಾ ಪುನೀತ್, ಗೌರಮ್ಮ, ನಾಗಲಕ್ಷ್ಮಿ ನಾಗೇಂದ್ರ, ವಿದ್ಯಾ, ಶ್ರೀನಿಧಿ, ಕು. ಅಶ್ವಿನಿ, ಮಾ. ಪೃಥು ಮತ್ತು ಮಾ. ವೇಂಕಟರಾಘವ ಇನ್ನಿತರರು ಭಾಗವಹಿಸಿದ್ದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ. ಇಂದುಮತಿರತ್ನಂ ಪ್ರಾರ್ಥಿಸಿ, ಅಧ್ಯಕ್ಷ ಎಸ್. ರಾಜರತ್ನಂ ಸ್ವಾಗತಿಸಿದರು,
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post