ಕಲ್ಪ ಮೀಡಿಯಾ ಹೌಸ್ | ಮೈಸೂರು |
ಪಿಜಿಎಲ್ ಸಂಸ್ಮರಣಾ ವೇದಿಕೆ ಡಿ. 13 ಮತ್ತು 14ರಂದು ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.
ಖ್ಯಾತ ಮೃದಂಗ ವಿದ್ವಾಂಸರಾಗಿದ್ದ ದಿ. ಪಿ.ಜಿ. ಲಕ್ಷ್ಮೀನಾರಾಯಣ ಅವರ 16ನೆಯ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಎರಡೂ ದಿನ ಸಂಜೆ 6ಕ್ಕೆ ಹಿರಿಯ ವಿದ್ವಾಂಸರಿಂದ ಕಛೇರಿಗಳನ್ನು ಹಮ್ಮಿಕೊಳ್ಳಲಾಗಿದೆ.
13ರ ಸಂಜೆ 6ಕ್ಕೆ ಹಿರಿಯ ಮೃದಂಗ ವಿದ್ವಾಂಸ, ಕರ್ನಾಟಕ ಕಲಾಶ್ರೀ ಟಿ.ಎಸ್. ಚಂದ್ರಶೇಖರ್ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ನಾದಬ್ರಹ್ಮ ಸಂಗೀತ ಸಭಾ ಗೌರವ ಕಾರ್ಯದರ್ಶಿ ಕೆ.ಎಸ್.ಎನ್. ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಮರಣಾ ವೇದಿಕೆ ಮುಖ್ಯಸ್ಥರಾದ ಪ್ರೊ. ಜಿ.ಎಸ್. ರಾಮಾನುಜನ್ ಉಪಸ್ಥಿತರಿರಲಿದ್ದಾರೆ.
ನಂತರ ವಿದ್ವಾನ್ ಆರ್.ಎಸ್. ನಂದಕುಮಾರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಲಿದೆ.
ಪಕ್ಕವಾದ್ಯದಲ್ಲಿ ವಿದ್ವಾನ್ ಟಿ.ಎಸ್. ಚಂದ್ರಶೇಖರ್ (ಮೃದಂಗ) ಮತ್ತು ವಿದುಷಿ ಡಾ. ವೀಣಾ ಸುರೇಶ್ (ವಯೋಲಿನ್) ಸಹಕಾರ ನೀಡಲಿದ್ದಾರೆ.
Also read: ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಥಾಪಿತವಾದ ಎನ್ಇಎಸ್ ಸಂಸ್ಥೆ ಶಿವಮೊಗ್ಗದ ಹೆಮ್ಮೆ
14ರ ಸಂಜೆ 6ಕ್ಕೆ ವಿದ್ವಾನ್ ಹೇರಂಭ ಮತ್ತು ಹೇಮಂತ ಅವರಿಂದ ಯುಗಳ ವೇಣುವಾದನವಿದೆ. ಪಕ್ಕವಾದ್ಯದಲ್ಲಿ ವಿದುಷಿ ಜ್ಯೋತ್ಸ್ನಾ ಶ್ರೀಕಾಂತ್ (ವಯೋಲಿನ್), ವಿದ್ವಾನ್ ಅರ್ಜುನ ಕುಮಾರ್ (ಮೃದಂಗ) ಮತ್ತು ವಿದ್ವಾನ್ ಎಸ್.ಎನ್. ನಾರಾಯಣ ಮೂರ್ತಿ (ಘಟ) ಸಹಕಾರವಿದೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪಿಜಿಎಲ್ ಸಂಸ್ಮರಣಾ ವೇದಿಕೆ ಮುಖ್ಯಸ್ಥ ಪ್ರೊ. ರಾಮಾನುಜನ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post